ಹದಗೆಟ್ಟ ತೊಡಿಕಾನ – ಕುದುರೆಪಾಯ ಮಾಪಳಕಜೆ ಮುಪ್ಪಸೇರು ಸಂಪರ್ಕ ರಸ್ತೆ

Advt_Headding_Middle
Advt_Headding_Middle

ತೊಡಿಕಾನ ದೇವಾಲಯ ಬಳಿಯಿಂದ ಮುಪ್ಪಸೇರು, ಕುದರೆಪಾಯ, ಮಾಪಳಕಜೆ ಸಂಪರ್ಕ ರಸ್ತೆ ಹದಗೆಟ್ಟಿದ್ದು ವಾಹನ ಸಂಚಾರ ನರಕ ಯಾತನೆಯಾಗಿ ಪರಿಣಮಿಸಿದೆ.
ತೊಡಿಕಾನ-ಮುಪ್ಪಸೇರು ,ಕುದರೆಪಾಯ ಮಾಪಳಕಜೆ ರಸ್ತೆ ಕಚ್ಚಾ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಈ ಹಿಂದೆ ಮತ್ಸ್ಯ ತೀರ್ಥ ಹೊಳೆಗೆ ಸೇತುವೆ ನಿರ್ಮಣವಾಗದ ಹಿನ್ನಲೆಯಲ್ಲಿ ಮಳೆಗಾಲ ವಾಹನಗಳು ಸಂಚಾರಿಸುತ್ತಿರಲಿಲ್ಲ.ಇದೀಗ ಸೇತುವೆ ಕೆಲ ತಿಂಗಳುಗಳ ಹಿಂದೆ ನಿರ್ಮಣಗೊಂಡಿದ್ದು, ಅನೇಕ ಜೀಪು ಬೈಕ್ ಗಳು ಸಂಚರಿಸುತ್ತವೆ. ಈ ಹಿನ್ನಲೆಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ವಾಹನಗಳು ಜಾರಿಕೊಂಡು ಹೋಗಿ ರಸ್ತೆ ಬದಿಗೆ ಸರಿಯುತ್ತಿವೆ.ರಸ್ತೆಗೆ ಚರಂಡಿಗಳಿಲ್ಲದೆ ರಸ್ತೆ ಹೊಂಡಗುಂಡಿಗಳಿಂದ ಕೂಡಿವೆ.ಚರಂಡಿಗಳಿಲ್ಲದೆ ಇರುವುದೇ ರಸ್ತೆ ಹದಗೆಡಲು ಮುಖ್ಯ ಕಾರಣವಾಗಿದೆ.

ಈಡೇರಿದ ಸೇತುವೆ ಬೇಡಿಕೆ
ಈ ರಸ್ತೆ ಅಭಿವೃದ್ಧಿ ಹಾಗೂ ಮತ್ಸ್ಯ ತೀರ್ಥ ಹೊಳೆಗೆ ಸೇತುವೆ ನಿರ್ಮಣ ಮಾಡಬೇಕೆಂದು ಸ್ಥಳೀಯರು ಸುಮಾರು ೨೦ ವರ್ಷಗಳಿಂದ ಬೇಡಿಕೆ ಇಟ್ಡಿದ್ದರು .ಈ ವರ್ಷ ಸೇತುವೆ ನಿರ್ಮಣದ ಬೇಡಿಕೆ ಈಡೇರಿದೆ. ಆದರೆ ರಸ್ತೆ ಅಭಿವ್ರದ್ದಿಯ ಬೇಡಿಕೆ ಹಾಗೆ ಉಳಿದುಕೊಂಡಿದೆ. ಆದರೆ ಶಾಸಕರನ್ನು ಸಂಪರ್ಕಿಸಿದ್ದಾಗ ಈ ರಸ್ತೆ ಅಭಿವೃದ್ಧಿಗೆ ಅನುದಾನ ಇಡಲಾಗಿದೆ ಎಂದು ತಿಳಿಸಿದ್ದಾರೆ.

ಅಂತರ್ ಜಿಲ್ಲಾ ಸಂಪರ್ಕ ರಸ್ತೆ
ಈ ರಸ್ತೆ ಅಂತರ್ ಜಿಲ್ಲಾ ಸಂಪರ್ಕ ರಸ್ತೆಯಾಗಿದ್ದು ಇದರ ಮೂಲಕ ಕೊಡಗು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದುರೆಪಾಯ,ಮಾಪಳಕಜೆ ದೇವಾಲಯ,ಕೂಡಡ್ಕ ಬಾಲೆಂಬಿ , ದ.ಕ ಸಂಪಾಜೆ ಹಾಗು ಕೊಡಗು ಸಂಪಾಜೆಯನ್ನು ಸಂಪರ್ಕಿಸುತ್ತದೆ. ಈ ಎಲ್ಲಾ ಕಾರಣಗಳಿಂದ ತೊಡಿಕಾನ ಮುಪ್ಪಸೇರು,ಕುದುರೆಪಾಯ,ಮಾಪಳಕಜೆ ರಸ್ತೆಯನ್ನು ಅಭಿವ್ರದ್ದಿ ಮಾಡುವ ಅಗತ್ಯ ಕಾಡುತ್ತಿದೆ.

ತೊಡಿಕಾನ-ಮುಪ್ಪಸೇರು-ಕುದುರೆಪಾಯ-ಮಾಪಳಕಜೆ ರಸ್ತೆ ಅಭಿವ್ರದ್ದಿಗೆ ಗ್ರಾಮ ಪಂಚಾಯತ್ ನಿಂದ ಅನುದಾನ ಇರಿಸಿಲ್ಲ.
ತುರ್ತು ಅಭಿವ್ರದ್ದಿಗೆ ಸ್ವಲ್ಪ ಅನುದಾನ ಒದಗಿಸಿ ಕೊಡಬಹುದು.
ಜಯಪ್ರಕಾಶ್ ಯಂ.ಆರ್ ಪಿ.ಡಿ.ಒ ಗ್ರಾಮ ಪಂಚಾಯತ್ ಅರಂತೋಡು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.