ಬೊಳುಬೈಲು: ಬಿಜೆಪಿ ಪಕ್ಷದ ಕಛೇರಿ ಉದ್ಘಾಟನೆ

Advt_Headding_Middle
Advt_Headding_Middle

ಜಾಲ್ಸೂರು ಗ್ರಾಮದ ಬೊಳುಬೈಲಿನಲ್ಲಿ ಬಿಜೆಪಿ ಪಕ್ಷದ ನೂತನ ಕಛೇರಿಯು ಸೆ.10ರಂದು ಉದ್ಘಾಟನೆಗೊಂಡಿತು.
ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್ ಅವರು ಪಕ್ಷದ ಕಛೇರಿಯನ್ನು ಉದ್ಘಾಟಿಸಿ, ಶುಭಹಾರೈಸಿದರು.


ಈ ಸಂದರ್ಭದಲ್ಲಿ ಪಕ್ಷದ ಕಛೇರಿಗೆ ಕೋಣೆಯನ್ನು ನೀಡಿದ ಕೆ.ಪಿ. ತಾರನಾಥ ಬೊಳುಬೈಲು ಅವರ ಪುತ್ರ ಚಿತ್ತರಂಜನ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ, ಬೊಳುಬೈಲು ವಾರ್ಡ್ ಸಮಿತಿ ಅಧ್ಯಕ್ಷ ವೆಂಕಟೇಶ ನಡುಬೆಟ್ಟು, ಕನಕಮಜಲು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಕರುಣಾಕರ ರೈ ಕುಕ್ಕಂದೂರು, ಜಾಲ್ಸೂರು ಗ್ರಾ.ಪಂ. ಮಾಜಿ ಸದಸ್ಯ ಕೆ.ಪಿ. ಭುವನೇಂದ್ರ ಬೊಳುಬೈಲು, ಮಾಜಿ ತಾ.ಪಂ. ಸದಸ್ಯ ಕೆ.ಪಿ. ಗೋಪಿನಾಥ್ ಬೊಳುಬೈಲು, ಕುಸುಮಾಧರ ಅರ್ಭಡ್ಕ, ಗಣೇಶ್ ಕಾಟೂರು, ನವಚೇತನ ಯುವಕ ಮಂಡಲದ ಅಧ್ಯಕ್ಷ ನಿತಿನ್ ಅರ್ಭಡ್ಕ, ದಯಾನಂದ ಬೊಳುಬೈಲು, ಪದ್ಮನಾಭ ನೆಕ್ರಾಜೆ, ಸುಭಾಷ್ ರೈ ಬೊಳುಬೈಲು, ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಗೀತಾಗೋಪಿನಾಥ್ ಬೊಳುಬೈಲು, ಶ್ರೀಮತಿ ವೇದಾವತಿ ನೆಕ್ರಾಜೆ ಸೇರಿದಂತೆ ಸ್ಥಳೀಯ ನವಚೇತನ ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಬೊಳುಬೈಲು ನಿವಾಸಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.