Breaking News

ದಾಖಲೆ ತಿದ್ದಿ ಸುಳ್ಳು ದೂರು ನೀಡಿ ಡಾ.ಕಾನತ್ತೂರ್ ವಿರುದ್ಧ ಷಡ್ಯಂತ್ರ

Advt_Headding_Middle
Advt_Headding_Middle

 

ಪಂಜದ ಡಾ. ದೇವಿಪ್ರಸಾದ್ ಕಾನತ್ತೂರ್ ಸೇವೆಯಿಂದ ಅಮಾನತು

ಕೋರ್ಟ್ ಮೆಟ್ಟಿಲೇರಿದ ಕಾನತ್ತೂರ್ – ಸಚಿವರಿಂದಲೂ ಪೋನ್

ಪಂಜದಲ್ಲಿ ಪಶು ಅಭಿವೃದ್ಧಿ ಅಧಿಕಾರಿಯಾಗಿರುವ ಡಾ.ದೇವಿಪ್ರಸಾದ್ ಕಾನತ್ತೂರ್ ರವರನ್ನು ಸೇವೆಯಿಂದ ಅಮಾನತುಗೊಳಿಸಿ ಪಶು ಸಂಗೋಪನಾ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ದೇವಿಪ್ರಸಾದ್ ಕಾನತ್ತೂರ್ ರವರು 2017 ರಲ್ಲಿ ಕೇನ್ಯ ಕಾಯಂಬಾಡಿಯ ಮಹಿಳೆಯೊಬ್ಬರಿಗೆ ಪಂಜ ಸೊಸೈಟಿಯಿಂದ ದನಕರು ಖರೀದಿ ಸಾಲಕ್ಕಾಗಿ ನೀಡಿದ್ದ ಜಾನುವಾರು ಆರೋಗ್ಯ ದೃಢಪತ್ರದ ದಿನಾಂಕವನ್ನು ತಿದ್ದಿ 14.3.2020 ರಂದು ತನಗೆ ಅಧಿಕಾರವಿಲ್ಲದೆಯೂ ಸರ್ಟಿಫಿಕೇಟ್ ನೀಡಿದ್ದಾರೆಂದು ಸುಳ್ಳು ದೂರು ನೀಡಿ , ದೇವಿಪ್ರಸಾದರು ಅಮಾನತುಗೊಳ್ಳುವಂತೆ ಮಾಡಲಾಗಿದೆ ಎಂದು ಹೇಳ ಲಾಗುತ್ತಿದ್ದು ದೇವಿಪ್ರಸಾದರು ಇದರ ವಿರುದ್ಧ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಪ್ರಕರಣ ಇದೀಗ ಜಿಲ್ಲಾ ಉಸ್ತುವಾರಿ ಸಚಿವರಲ್ಲಿಗೆ ತಲುಪಿದ್ದು , ಸಚಿವರು ಪಶುಸಂಗೋಪನಾ ಇಲಾಖೆಯ ಆಯುಕ್ತರನ್ನು ಸಂಪರ್ಕಿಸಿ ವಿವರಣೆ ಕೇಳಿದ್ದಾರೆಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಅಮಾನತು ಆದೇಶ ಹಿಂತೆಗೆಯಲ್ಪಡುವ ಸಾಧ್ಯತೆಯಿದೆ ಎಂದೂ ಹೇಳ ಲಾಗುತ್ತಿದೆ.

ಡಾ.ದೇವಿಪ್ರಸಾದರು ಪಶು ಅಭಿವೃದ್ಧಿ ಅಧಿಕಾರಿಯಾಗಿರುವಂತೆಯೇ ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿಯೂ, ಪಂಜ ಗ್ರಾಮ ಪಂಚಾಯತ್ ಆಡಳಿತಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.