Breaking News

ಅರಂತೋಡು: ಸಕ್ಕರೆ ಕಾಯಿಲೆ ಪೀಡಿತ ಬಾಲಕನ ಚಿಕಿತ್ಸೆಗೆ ಬೇಕಿದೆ ದಾನಿಗಳ ನೆರವಿನ ಹಸ್ತ

Advt_Headding_Middle
Advt_Headding_Middle

 

ಸಕ್ಕರೆ ಕಾಯಿಲೆ ಎಂಬುದು ಇತ್ತೀಚಿನ ವರ್ಷಗಳಲ್ಲಿ ಸಣ್ಣ ಮಕ್ಕಳನ್ನೂ ಕಾಡುತ್ತಿದ್ದು, ಸ್ಥೂಲಕಾಯ, ಕಡಿಮೆ ದೈಹಿಕ ಸಕ್ರಿಯತೆ ಇರುವ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇಂತಹದ್ದೇ ಒಂದು ಪ್ರಕರಣ ಅರಂತೋಡು ಗ್ರಾಮದ ಬಾಲಕನೋರ್ವನಲ್ಲಿ ಕಂಡುಬಂದಿದ್ದು, ಈ ಬಾಲಕ ಪ್ರತಿನಿತ್ಯ ಇನ್ಸುಲಿನ್ ಅವಲಂಭಿತವಾಗಿ ಜೀವನ ನಡೆಸುವಂತಾಗಿದೆ.


ಅರಂತೋಡು ಗ್ರಾಮದ ಗುಂಡ್ಲಮನೆ ದಿ. ವಿಲಾಸ್ ಗೌಡ ಹಾಗೂ ಶ್ರೀಮತಿ ಹೇಮಲತಾ ದಂಪತಿಗಳ ಪುತ್ರನಾಗಿರುವ ಕೌಶಿಕ್ ಕಳೆದ ಎರಡು ವರ್ಷಗಳಿಂದ ಸಕ್ಕರೆ ಕಾಯಿಲೆ ರೋಗಿಯಾಗಿದ್ದು, ಇನ್ಸುಲಿನ್ ಅವಲಂಬಿಸಿದ್ದಾನೆ.
ಕೌಶಿಕ್ 8ನೇ ತರಗತಿಯಲ್ಲಿ ಓದುತ್ತಿದ್ದಾಗ ಪದೇ ಪದೇ ತಲೆಸುತ್ತು ಬಂದು ಮೂರ್ಛೆ ಹೋಗುತ್ತಿದ್ದ. ಇದನ್ನು ಕಂಡ ತಾಯಿ ಹೇಮಲತ ಅವರು ಸುಳ್ಯದ ವೈದ್ಯರಲ್ಲಿ ಪರೀಕ್ಷೆ ನಡೆಸಿದಾಗ ಸಕ್ಕರೆ ಕಾಯಿಲೆ ಇದ್ದು, ಮೂರ್ಛೆ ಹೋಗುತ್ತಿರುವುದು ತಿಳಿಯಿತು. ಆ ಬಳಿಕ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದು, ಇತ್ತೀಚೆಗೆ ಕಿಡ್ನಿ ಸಂಬಂಧಿತ ಕಾಯಿಲೆಯೂ ಬಾಲಕನನ್ನು ಕಾಡುತ್ತಿದೆ. ಈ ಬಗ್ಗೆ ಬಾಲಕನ ತಲೆ ಸ್ಕ್ಯಾನಿಂಗ್ ನಡೆಸುವಂತೆ ವೈದ್ಯರು ಸೂಚಿಸಿದ್ದಾರೆ.
ಆದರೆ ಕಳೆದ ನಾಲ್ಕು ವರ್ಷದ ಹಿಂದೆ ತಂದೆಯನ್ನು ಕಳೆದುಕೊಂಡಿರುವ ಕೌಶಿಕ್ ನ ಮನೆಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ತಾಯಿ ಹೇಮಲತ ಅವರು ಕೂಲಿಕೆಲಸಕ್ಕೆ ಹೋಗಿ ಮಗನಿಗೆ ಔಷಧಿ ಮಾಡುತ್ತಿದ್ದಾರೆ. ಸಕ್ಕರೆ ಕಾಯಿಲೆಯಿಂದ ಪದೇ ಪದೇ ಮೂರ್ಛೆ ಹೋಗುತ್ತಿದ್ದ ಕಾರಣದಿಂದ ಶಾಲೆಯನ್ನು 8ನೇ ತರಗತಿಯಲ್ಲೇ ಬಿಟ್ಟಿರುವ ಬಾಲಕನ ಚಿಕಿತ್ಸೆಗಾಗಿ ಅರಂತೋಡು-ತೊಡಿಕಾನ ಪ್ರಾ.ಕೃ.ಪ.ಸ.ಸಂಘ ಹಾಗೂ ಸುಳ್ಯದ ರೋಟರಿ ಸಂಘದ ವತಿಯಿಂದ ಒಂದಿಷ್ಟು ಧನಸಹಾಯ ಮಾಡಲಾಗಿದ್ದು, ಬಾಲಕನ ಹೆಚ್ಚಿನ ಚಿಕಿತ್ಸೆಗಾಗಿ ದಾನಿಗಳಿಂದ ನೆರವಿನ ಹಸ್ತ ಬೇಕಾಗಿದೆ. ಆದ್ದರಿಂದ ಈ ಬಾಲಕನಿಗೆ ಧನಸಹಾಯ ಮಾಡಲಿಚ್ಚಿಸುವವರು ಬ್ಯಾಂಕ್ ಆಫ್ ಬರೋಡ ಅರಂತೋಡು ಶಾಖೆ ಬ್ಯಾಂಕ್ ಅಕೌಂಟ್ ನಂಬರ್ 83690100005706
IFSC ನಂಬ್ರ BARB0VJARTH
MICR: 574012302ಕ್ಕೆ ಹಣ ಜಮೆ ಮಾಡಿ ಬಾಲಕನ ಚಿಕಿತ್ಸೆಗೆ ನೆರವಾಗಬೇಕಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.