ಜೇಸಿಐ ಸುಳ್ಯ ಪಯಸ್ವಿನಿ ಜೇಸಿಐ ಸಪ್ತಾಹದ 2 ನೇ ದಿನದ ಕಾರ್ಯಕ್ರಮ

Advt_Headding_Middle
Advt_Headding_Middle

 

ಅಕ್ಕೋಜಿಪಾಲ್ ಅಂಗನವಾಡಿ ಕೇಂದ್ರದಲ್ಲಿ ಕೊರೊನ ವಾರಿಯರ್ಸ್ ಗೆ ಸನ್ಮಾನ ಮತ್ತು ಸ್ವಚ್ಛತೆಯ ಬಗ್ಗೆ ಕಾರ್ಯಕ್ರಮ

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ “ಜೇಸಿಐ ಸಪ್ತಾಹ”ದ 2 ನೇ ದಿನವಾದ ಸೆಪ್ಟೆಂಬರ್ 10 ರಂದು ಅಮರಪಡ್ನೂರು ಗ್ರಾಮದ ಅಕ್ಕೋಜಿಪಾಲ್ ಅಂಗನವಾಡಿ ಕೇಂದ್ರ ದಲ್ಲಿ ಕೊರೊನ ವಾರಿಯರ್ಸ್ ಗೆ ಸನ್ಮಾನ ಮತ್ತು ಸ್ವಚ್ಛತೆಯ ಬಗ್ಗೆ ಕಾರ್ಯಕ್ರಮ ನಡೆಯಿತು.


ಜೇಸಿಐ ವಲಯ 15 ರ ಯುವ ಜೇಸಿ ನಿರ್ದೇಶಕರಾದ ಜೇಸಿ ಮರಿಯಪ್ಪರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭಹಾರೈಸಿದರು. ವಲಯ ಸಂಯೋಜಕ ಜೇಸಿ ವಾಸುದೇವ ಮೇಲ್ಪಾಡಿ ಯವರು ಸನ್ಮಾನಿತರನ್ನು ಸನ್ಮಾನಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.


ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷ ಜೇಸಿ ದೇವರಾಜ್ ಕುದ್ಪಾಜೆ ವಹಿಸಿದ್ದರು. ಸನ್ಮಾನಿತೆ ಆಶಾ ಕಾರ್ಯಕರ್ತೆ ಶ್ರಿ ಮತಿ ಪ್ರೇಮ ಎಂ. ಅನಿಸಿಕೆ ಹಂಚಿಕೊಂಡರು. ಜೇಸಿಐ ಘಟಕದ ಪೂರ್ವಾಧ್ಯಕ್ಷರಾದ ಜೇಸಿ ಪ್ರಸಾದ್ ಕೆಮ್ಮಿಂಜೆ, ಸ್ಥಳೀಯ ಬಾಲವಿಕಾಸ ಸಮಿತಿ ಸದಸ್ಯೆ ಶ್ರೀಮತಿ ಗೌರಿ, ಸಪ್ತಾಹ ನಿರ್ದೇಶಕ ಜೇಸಿ ರಂಜಿತ್ ಕುಕ್ಕೆಟ್ಟಿ, ಕಾರ್ಯಕ್ರಮದ ಯೋಜನಾ ನಿರ್ದೇಶಕ ಜೇಸಿ ರವಿ ಅಕ್ಕೋಜಿಪಾಲ್, ಜೇಸಿ ಚೇತನ್ ಚಿಲ್ಪಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ಥಳೀಯ ಸ್ವ ಸಹಾಯ ಸಂಘ ಮಹಿಳಾ ಸದಸ್ಯರು, ಬಾಲವಿಕಾಸ ಮಂಡಳಿ ಸದಸ್ಯರು, ಸೇರಿದಂತೆ ಅನೇಕ ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು. ಜೇಸಿ ಅಶೋಕ ಚೂಂತಾರ್, ಜೇಸಿ ಯೋಗೀಶ್ ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.