Breaking News

ಜಿಯೋ ನೆಟ್ವರ್ಕ್‌ ಕೊಟ್ಟೂ ಪ್ರಯೋಜನವಿಲ್ಲ ಹರಿಹರ, ಕಲ್ಮಕಾರು ಜನರ ಆಕ್ರೋಶ

Advt_Headding_Middle
Advt_Headding_Middle

 

ಮಾಧವ ಚಾಂತಾಳ, ಸತೀಶ್ ಕೊಮ್ಮೆಮನೆ, ಉಲ್ಲಾಸ್ ಕಜ್ಜೋಡಿ ಅಸಮಾಧಾನ ವ್ಯಕ್ತ

ಹರಿಹರ, ಕಲ್ಮಕಾರುವಿನ ಜಿಯೋ ಟವರ್ ಕಾರ್ಯಾರಂಭ ಮಾಡಿದ್ದರೂ ನೆಟ್ವರ್ಕ್‌ ಸಮಸ್ಯೆ ಬಗೆಹರಿದಿಲ್ಲ ಎಂದು ಕೆಲ ನಾಗರಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


ಕೊಲ್ಲಮೊಗ್ರ ಕ್ಕೆ ಹೊಂಡ ಭಾಗ್ಯ ಮಾತ್ರ – ಮಾಧವ ಚಾಂತಾಳ

ಬಹುದಿನದ ಜಿಯೋ ಕನಸು ಭಗ್ನವಾಗಿದೆ. ಕೊಲ್ಲಮೊಗ್ರು ವಿಗೆ ರೋಡ್ ಸೈಡ್ ಹೊಂಡ ಭಾಗ್ಯ ಮಾತ್ರ ದೊರೆತಿರುವುದು. ಬಿಎಸ್ ಎನ್ಎಲ್ ಮತ್ತು ಜಿಯೋ ದವರು ನಮ್ಮ ಭಾಗದಲ್ಲಿ ರಸ್ತೆ ಬಳಸಿಕೊಂಡು ನಮಗೆ ಸರಿಯಾದ ನೆಟ್ವರ್ಕ್‌ ಕೊಟ್ಟಿಲ್ಲ. ಜಿಯೋ ದವರು ಈ ಊರಿನ ಜನರನ್ನು ಬಳಸಿಕೊಂಡಿದ್ದರೂ ನಮಗೆ ನೆಟ್ವರ್ಕ್ ನಲ್ಲಿ ವಿಷಯದಲ್ಲಿ ಮೋಸ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆ, ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ, ಗ್ರಾಮ ಪಂಚಾಯತ್, ಗೋ ಆಸ್ಪತ್ರೆ ಎಲ್ಲಾ ಇದ್ದರೂ ನೆಟ್ವರ್ಕ್ ಮಾತ್ರ ಇಲ್ಲವೇ ಇಲ್ಲ.

– ಮಾಧವ ಚಾಂತಾಳ

ಹರಿಹರದ ಜಿಯೋ ಟವರ್ ಊಟಕ್ಕಿಲ್ಲದ ಉಪ್ಪಿನಕಾಯಿ – ಉಲ್ಲಾಸ್

ಸುಳ್ಯ ತಾಲೂಕಿನ ಒಂದು ಗ್ರಾಮವಾದ ಹರಿಹರ ಪಲ್ಲತ್ತಡ್ಕ ಇಲ್ಲಿ ನೆಟ್ ವರ್ಕ್ ವ್ಯವಸ್ಥೆಯೇ ಇರಲಿಲ್ಲ. ಆದರೆ ಸ್ವಲ್ಪ ವರ್ಷದ ಮುಂಚೆ ಬಿ. ಎಸ್. ಎನ್. ಎಲ್ ಅಸ್ತಿತ್ವಕ್ಕೆ ಬಂತು. ಆದರೆ ಅದು ಕೆಲವು ಕಡೆಗಳಿಗೆ ಮಾತ್ರ 3ಜಿ ನೆಟ್ ವರ್ಕ್ ಸಿಗುತ್ತದೆ. ಆದರೆ ಕೆಲವು ಕಡೆಗಳಿಗೆ ಅದೂ ಸಿಗುವುದಿಲ್ಲ ಮತ್ತು ಬಿ. ಎಸ್. ಎನ್. ಎಲ್ ವಿದ್ಯುತ್ ಇದ್ದರೆ ಮಾತ್ರ ನೆಟ್ ವರ್ಕ್ ಸಿಗುತ್ತದೆ. ವಿದ್ಯುತ್
ಇಲ್ಲದಿದ್ದರೆ ನೆಟ್ ವರ್ಕ್ ಇರುವುದಿಲ್ಲ. ಕೊರೋನಾ ಲಾಕ್ ಡೌನ್ ಸಮಯದಲ್ಲಿ ಶಾಲಾ-ಕಾಲೇಜುಗಳು ಪ್ರಾರಂಭವಾಗದ ಕಾರಣ ಸರ್ಕಾರ ಆನ್ ಲೈನ್ ತರಗತಿ ಪ್ರಾರಂಭಿಸಿತ್ತು ಆದರೆ ಹರಿಹರ ಹಾಗೂ ಅಕ್ಕಪಕ್ಕದ ಗ್ರಾಮದ ಹಲವು ವಿದ್ಯಾರ್ಥಿಗಳು ಆನ್ ಲೈನ್ ತರಗತಿ ಗಳಿಗಾಗಿ ಎತ್ತರದ ಗುಡ್ಡ ಪ್ರದೇಶಗಳಿಗೆ ಹೋಗುವಂತಹ ಪರಿಸ್ಥಿತಿ ಇತ್ತು. 1-2 ವರ್ಷದ ಹಿಂದೆ ಜನರಿಗೆ ಆಶಾಕಿರಣ ಮೂಡಿಸಿದ್ದು ಹರಿಹರದಲ್ಲಿ ಜಿಯೋ ಟವರ್ ಸ್ಥಾಪನೆ ಆಗುತ್ತದೆ ಎನ್ನುವ ಮಾತು. ಹಾಗಾಗಿ ಸುಮಾರು 1-2 ವರ್ಷದಿಂದ ಇವತ್ತು ನೆಟ್ ವರ್ಕ್ ಸಿಗುತ್ತದೆ, ನಾಳೆ ನೆಟ್ ವರ್ಕ್ ಸಿಗುತ್ತದೆ ಎಂದು ಕಾತರಿಸುತ್ತಿದ್ದ ಜನರಿಗೆ ಕೊನೆಗೂ ಜಿಯೋ 09/09/2020 ರಂದು ಓಪನ್ ಆಯಿತು. ಆದರೆ ಆ ನೆಟ್ ವರ್ಕ್ ಕೇವಲ ಕೆಲವು ಕಡೆ ಮಾತ್ರ ಸಿಗುತ್ತಿದೆ ಇನ್ನೂ ಹಲವು ಕಡೆಗಳಿಗೆ ಆ ನೆಟ್ ವರ್ಕ್ ತಲುಪುತ್ತಲೇ ಇಲ್ಲ.
ಎಲ್ಲಾ ಬಿಡಿ ಹರಿಹರ ಪಲ್ಲತ್ತಡ್ಕ ಕ್ಕೆ ಹತ್ತಿರವಾದ ಕಜ್ಜೋಡಿ ಗೆ ಜಿಯೋ ನೆಟ್ ವರ್ಕ್ ಸಿಗುವುದೇ ಇಲ್ಲ.
ಟವರ್ ಸ್ಥಾಪಿಸಿದ ಮೇಲೆ ಎಲ್ಲರಿಗೂ ನೆಟ್ ವರ್ಕ್ ಸಿಗಬೇಕು ಆದರೆ ಇಲ್ಲಿ ಹಲವು ಜನರು ಜಿಯೋ ನೆಟ್ ವರ್ಕ್ ನಿಂದ ವಂಚಿತರಾಗಿದ್ದಾರೆ . ಈಗ ನೋಡಿದರೆ ಜಿಯೋ ಗಿಂತ ಬಿ. ಎಸ್. ಎನ್. ಎಲ್ ಟವರ್ ಬೆಸ್ಟ್ ಎನಿಸುತ್ತದೆ. ಏಕೆಂದರೆ 3ಜಿ ನೆಟ್ ವರ್ಕ್ ಸಿಗದಿದ್ದರೂ ಫೋನ್ ನಲ್ಲಿ ಮಾತನಾಡುವಷ್ಟು ನೆಟ್ ವರ್ಕ್ ಸಿಗುತ್ತದೆ. ಆದರೆ ಜಿಯೋ ನೆಟ್ ವರ್ಕ್ ಅಷ್ಟೂ ಸಿಗುವುದಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸರಿಪಡಿಸಬೇಕಾಗಿ ಈ ಮೂಲಕ ಜಿಯೋ ನೆಟ್ ವರ್ಕ್ ನಿಂದ ವಂಚಿತರಾದ ಎಲ್ಲಾ ಜನರ ಪರವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.
– ಉಲ್ಲಾಸ್ ಕಜ್ಜೋಡಿ.

ಜಿಯೋ ನಿರಾಶೆ ಮೂಡಿಸಿದೆ – ಸತೀಶ್ ಕೊಮ್ಮೆಮನೆ

ಹಳ್ಳಿ ಹಳ್ಳಿಗಳಲ್ಲಿ ಜಿಯೋ ಟವರ್ ಒಪನ್ ಆಗುತ್ತೆ ಅಂತ ಖುಷಿ ಖುಷಿಯಾಗಿದ್ದ ಜನರು . ಈಗ ನೋಡಿದ್ರೆ ಹಳ್ಳಿಯ ಪೇಟೆಯಲ್ಲಿ ಸಿಗದ ಜಿಯೋ ನೇಟ್ ವರ್ಕ್ ನಿಂದ ಹಳ್ಳಿಯ ಮಕ್ಕಳ ಆನ್ ಲೈನ್ ಶಿಕ್ಷಣ ಕ್ಕೆ ಜಿಯೋ ಸಹಾಯ ಆಗುತ್ತೆ ಅಂತ ಅಂದುಕೊಂಡ ಮಕ್ಕಳಿಗೆ ನಿರಾಶೆ ಮೂಡಿಸಿದೆ. ಜಿಯೋದವರು ಹಳ್ಳಿಗಳಲ್ಲಿ ಟವರ್ ಮಾಡಿದ್ದಾರೆಯೇ, ಹೊರತು ಜನರಿಗೆ ಉಪಯೋಗಕ್ಕೆ ಅಲ್ಲ. ಕಲ್ಮಕಾರಿನಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲೇ ನೆಟ್ವರ್ಕ್ ಸಿಗುವುದಿಲ್ಲ.

– ಸತೀಶ್ ಕೊಮ್ಮೆಮನೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.