ಡಾ.ಲೀಲಾಧರ್ ಡಿ.ವಿ.ಯವರಿಗೆ ಜೇಸಿಐ ಯೂತ್ ಇನ್ ಸ್ಪೈಯರ್ ಅವಾರ್ಡ್

Advt_Headding_Middle
Advt_Headding_Middle

 

ಜೇಸಿಐ ಸುಳ್ಯ ಸಿಟಿ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಕೊಡಮಾಡುವ ಜೇಸಿಐ ಯೂತ್ ಇನ್ ಸ್ಪೈಯರ್ ಅವಾರ್ಡ್ ಗೆ ಸುಳ್ಯ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ.ಯವರನ್ನು ಆಯ್ಕೆ ಮಾಡಲಾಗಿದೆ ಎಂದು ಜೇಸಿಐ ಸುಳ್ಯ ಸಿಟಿ ಕ್ಲಬ್ ಅಧ್ಯಕ್ಷ ವಿನಯ್ ರಾಜ್ ಮಡ್ತಿಲ ತಿಳಿಸಿದರು.

ಸೆ.11 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮ ದ ವಿವರ ನೀಡಿದರು.

 

ಒಂದು ವಾರಗಳ ಕಾಲ ಯುವ ಸಪ್ತಾಹ ಅದ್ದೂರಿಯಾಗಿ ನಡೆದಿದೆ.

ಅದರ ಸಮಾರೋಪ‌ ಸಮಾರಂಭ ಹಾಗೂ ಅವಾರ್ಡ್ ಕಾರ್ಯಕ್ರಮ ಪರಿವಾರಕಾನ ಉಡುಪಿ ಗಾರ್ಡನ್ ಹೋಟೆಲ್ ಸಭಾಭವನದಲ್ಲಿ ಸೆ. 12 ರಂದು ಸಂಜೆ ನಡೆಯಲಿದೆ ಎಂದು ವಿವರ ನೀಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ್ ಅಭಿನಂದನಾ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಆಗಮಿಸಲಿದ್ದಾರೆ. ವಲಯ ಉಪಾಧ್ಯಕ್ಷ ಪ್ರದೀಪ್ ಬಾಕಿಲ ಭಾಗವಹಿಸಲಿದ್ದಾರೆ ಎಂದು ಜೇಸಿಐ ಸುಳ್ಯ ಸಿಟಿಯ ಸ್ಥಾಪಕರಾದ ಮನಮೋಹನ್ ಬಳ್ಳಡ್ಕ ಹೇಳಿದರು.

 

ಪತ್ರಿಕಾಗೋಷ್ಠಿ ಯಲ್ಲಿ ಲೋಕೇಶ್ ಊರುಬೈಲು, ಜೇಸಿ ವೀಕ್ ಡೈರೆಕ್ಟರ್ ರಂಜಿತ್ ಪಿ.ಜೆ. ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.