Breaking News

ಅಜ್ಜಾವರ : ಸರಕಾರಿ ಭೂಮಿ ಅತಿಕ್ರಮಿಸಿ ಬೇಲಿ ಹಾಕಿದರೆಂಬ ದೂರು ಕಂದಾಯ ಇಲಾಖೆಯಿಂದ ಸ್ಥಳ ಪರಿಶೀಲನೆ : ಬೇಲಿ ತೆರವು

Advt_Headding_Middle
Advt_Headding_Middle

 

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಎಂಬಲ್ಲಿ ಸರಕಾರಿ ಜಾಗವನ್ನು ಅತಿಕ್ರಮಿಸಿ ಬೇಲಿ ಹಾಕಿರುವುದನ್ನು ತೆರವು ಮಾಡಬೇಕೆಂದು ಸ್ಥಳೀಯರು ಪುತ್ತೂರು ಸಹಾಯಕ ಕಮಿಷನರ್‌ರಿಗೆ ದೂರಿಕೊಂಡ ಮೇರೆಗೆ, ಸ್ಥಳಕ್ಕೆ ತೆರಳಿದ ಕಂದಾಯ ಇಲಾಖೆಯವರು ಬೇಲಿ ತೆರವುಗೊಳಿಸಿದ ಘಟನೆ ವರದಿಯಾಗಿದೆ.


ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಸರ್ವೆ ನಂ.೨೦೭/೧ರಲ್ಲಿ ಸಾರ್ವಜನಿಕ ಉದ್ದೇಶಕ್ಕೆಂದು ಉಪಯೋಗಿಸುತ್ತಿರುವ ಕಂದಾಯ ಇಲಾಖೆಯ ಸರಕಾರಿ ಭೂಮಿ ಸುಮಾರು ೧ ಎಕ್ರೆ ಇದ್ದು, ಇದರ ಪಕ್ಕದಲ್ಲಿ ಮನೆ ಕಟ್ಟಿಕೊಂಡಿರುವ ಆಲಿ ಬ್ಯಾರಿ ಎಂಬವರಿಗೆ ಅಕ್ರಮ ಸಕ್ರಮದಲ್ಲಿ ೫ ಸೆಂಟ್ಸ್ ಜಾಗ ಮಂಜೂರಾತಿಗೊಂಡಿದೆ.

ಈಗ ಅವರು ೫ ಸೆಂಟ್ಸ್ ಭೂಮಿ ಮಾರಾಟ ಮಾಡುತ್ತಿದ್ದು ಇದರ ಪಕ್ಕದಲ್ಲಿರುವ ಸಾರ್ವಜನಿಕರು ಉಪಯೋಗಿಸುತ್ತಿರುವ ೦.೫೦ ಎಕ್ರೆ ಸರಕಾರಿ ಭೂಮಿಯನ್ನು ತಮ್ಮದೆಂದು ಹೇಳಿಕೊಂಡು ಬೇಲಿ ನಿರ್ಮಿಸಿ ಅತಿಕ್ರಮಿಸಿದ್ದಾರೆ. ಆದ್ದರಿಂದ ತಾವು ಸ್ಥಳ ಪರಿಶೀಲನೆ ನಡೆಸಿ, ಅತಿಕ್ರಮಣ ಭೂಮಿ ತೆರವು ಮಾಡಬೇಕೆಂದು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕರ ಉಪಸ್ಥಿತಿಯಲ್ಲಿ ನಿರಂಜನ್ ಕರ್ಲಪ್ಫಾಡಿ, ಪುರುಷೋತ್ತಮ ನಾರ್ಕೋಡು ಸೇರಿದಂತೆ ಸ್ಥಳೀಯರು ಸಹಿ ಮಾಡಿಕೊಂಡು ಸೆ.೧೦ರಂದು ಸುಳ್ಯಕ್ಕೆ ಬಂದಿದ್ದ ಪುತ್ತೂರು ಸಹಾಯಕ ಕಮಿಷನರ್ ಡಾ| ಯತೀಶ್ ಉಳ್ಳಾರಿಗೆ ಮನವಿ ಸಲ್ಲಿಸಿದರು.


ಈ ಮನವಿಯ ಹಿನ್ನಲೆಯಲ್ಲಿ ತಹಶೀಲ್ದಾರ್ ಅನಂತಶಂಕರ್‌ರಿಗೆ ಸ್ಥಳ ಪರಿಶೀಲನೆ ನಡೆಸಿ, ಅತಿಕ್ರಮಣ ಬೇಲಿ ತೆರವು ಮಾಡುವಂತೆ ಸೂಚನೆ ನೀಡಿದರಲ್ಲದೆ, ಸರಕಾರಿ ಭೂಮಿಯನ್ನು ಪಂಚಾಯತ್‌ಗೆ ಕಾದಿರಿಸುವಂತೆ ಹೇಳಿದರೆನ್ನಲಾಗಿದೆ.
ಬೇಲಿ ತೆರವು : ಸೆ.೧೧ರಂದು ಅಜ್ಜಾವರ ವಿ.ಎ. ಶರತ್ ಹಾಗೂ ಗ್ರಾಮ ಸಹಾಯಕ ಶಿವಣ್ಣರವರು ಕರ್ಲಪ್ಪಾಡಿಗೆ ತೆರಳಿ ದಾಖಲೆ ಪರಿಶೀಲಿಸಿದರಲ್ಲದೆ, ಬೇಲಿ ತೆರವುಗೊಳಿಸಿ, ತಹಶೀಲ್ದಾರರಿಗೆ ವರದಿ ಮಾಡಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.