ಜೇಸಿಐ ಸುಳ್ಯ ಪಯಸ್ವಿನಿ ಜೇಸಿ ಸಪ್ತಾಹದ 3ನೇ ದಿನದ ಕಾರ್ಯಕ್ರಮ

Advt_Headding_Middle
Advt_Headding_Middle

 


ಜೇಸಿಐ ಸುಳ್ಯ ಪಯಸ್ವಿನಿ  “ಜೇಸಿಐ ಸಪ್ತಾಹ”ದ 3 ನೇ ದಿನವಾದ ಸೆ. 11 ರಂದು ‘ನೀರನ್ನು ಮಿತವಾಗಿ ಬಳಸಿ ‘ಸ್ಟಿಕ್ಕರ್ ಬಿಡುಗಡೆ ಯನ್ನು ಸುಳ್ಯದ ಪ್ರತಿಷ್ಠಿತ ಸಸ್ಯಾಹಾರಿ ಹೋಟೆಲ್ ದ್ವಾರಕ ಹೋಟೆಲ್ ನಲ್ಲಿ ಬಿಡುಗಡೆ ಮಾಡಲಾಯಿತು.

ಜೇಸಿಐ ವಲಯ ಪೂರ್ವವಲಯಾಧಿಕಾರಿ ಜೇಸಿ ಲೋಕೇಶ್ ಪೆರ್ಲಂಪಾಡಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಪೂರ್ವಾಧ್ಯಕ್ಷರಾದ ಜೇಸಿ ದೇವಿಪ್ರಸಾದ ಕುದ್ಪಾಜೆ, ಜೇಸಿ ಬೀಮರಾವ್ ವಾಷ್ಟರ್, ಹೋಟೆಲ್ ನ ಮಾಲಕರಾದ ವಸಂತ ಎನ್ ಉಪಸ್ಥಿತರಿದ್ದು ಶುಭಹಾರೈಸಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷ ಜೇಸಿ ದೇವರಾಜ್ ಕುದ್ಪಾಜೆ ವಹಿಸಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜೇಸಿಐ ಭಾರತದ ರಾಷ್ಟ್ರೀಯ ಕಾರ್ಯಕ್ರಮ ವಿಭಾಗದ ಸಂಯೋಜಕರಾದ ಜೇಸಿಐ ಪಿಪಿಪಿ ಅಶೋಕ್ ಚೂಂತಾರ್, ಸಪ್ತಾಹ ನಿರ್ದೇಶಕ ಜೇಸಿ ರಂಜಿತ್ ಕುಕ್ಕೆಟ್ಟಿ, ಜೇಸಿ ಗುರುರಾಜ್ ಅಜ್ಜಾವರ, ಸುರೇಶ್ ಕಾಮತ್, ಯೋಗೀಶ್ ಚೂಂತಾರ್, ಜೇಸಿ ಚೇತನ್ ಚಿಲ್ಪಾರ್, ರವಿಕುಮಾರ್ ಅಕ್ಕೋಜಿಪಾಲ್ ಹಾಗೂ ಹೋಟೆಲ್ ಸಿಬ್ಬಂದಿ ವರ್ಗದವರು ಸಹಕರಿಸಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.