ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಸಮರ್ಪಣೆ, ಪ್ರತಿಭಾ ಪುರಸ್ಕಾರ

Advt_Headding_Middle
Advt_Headding_Middle

 

ಸಮಾಜಕ್ಕೆ ಗೌರವ ತಂದುಕೊಟ್ಟವರನ್ನು ಗೌರವಿಸುವುದು ಮಾದರಿ : ಸಲೀಂ ಅಹಮ್ಮದ್

ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅರಂತೋಡು ಇದರ ವತಿಯಿಂದ ನೀಡಲಾಗುವ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಸಮರ್ಪಣಾ ಕಾರ್ಯಕ್ರಮ ಇಂದು ನಡೆಯಿತು.

2019 ನೇ ಸಾಲಿನ ಎಕ್ಸಲೆನ್ಸ್ ಅವಾರ್ಡನ್ನು ಪತ್ರಿಕಾರಂಗದಲ್ಲಿ ಅವಿರತ ಸೇವೆ ಸಲ್ಲಿಸಿದ ಕೇರಳದ ಮಾಧ್ಯಮ ಪತ್ರಿಕೆಯ ಮುಖ್ಯ ವರದಿಗಾರ ಮತ್ತು ಯುನೆಸೆಫ್ ಪ್ರಶಸ್ತಿ ವಿಜೇತ ರವೀಂದ್ರನ್ ರಾವನೇಶ್ವರಮ್ ಅವರಿಗೆ ನೀಡಲಾಯಿತು.

ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸರಕಾರದ ನೆಹರು ಯುವ ಕೇಂದ್ರದ ಮಾಜಿ ಮಹಾ ನಿರ್ದೇಶಕ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಧ್ಯಕ್ಷ ಸಲೀಮ್ ಅಹಮದ್ ಪ್ರಶಸ್ತಿ ಪ್ರದಾನ ಮಾಡಿದರು.

ಎಸ್.ಎಸ್.ಎಲ್.ಸಿ.ಮತ್ತು ಪಿಯುಸಿ ಯಲ್ಲಿ ತಾಲೂಕಿನಲ್ಲಿ ಪ್ರಥಮ ಮತ್ತು ದ್ವಿತೀಯ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ತೆಕ್ಕಿಲ್ ಶಾಲೆಯ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕರ್ನಾಟಕ ಸರಕಾರದ ವಿಧಾನ ಪರಿಷತ್ತಿನ ವಿರೋದ ಪಕ್ಷದ ಮುಖ್ಯ ಸಚೆತಕರಾದ ಎಂ. ನಾರಾಯಣ ಸ್ವಾಮಿ ಸನ್ಮಾನಿಸಿದರು. ಎ.ಎಲ್. ಅನುಷ್, ಫಾತಿಮಾತ್ ಮುಬೀನಾ, ಗೌರಿ ಪ್ರಿಯಾ, ಮೇಘ ಸಿ.ವೈ, ಮರಿಯಂ ರಫಾನಾ, ಶಫಾಸ್ ಮತ್ತು ಪವನ್ ಗೌರವ ಸ್ವೀಕರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕೆ,ಆರ್.ಗಂಗಾಧರ್ , ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ.ರೈ, ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ವಾಸುದೇವ ಕಟ್ಟಮನೆ, ಅರಂತೋಡು ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ತೆಕ್ಕಿಲ್ ಶಾಲಾ ಮುಖ್ಯೋಪಾದ್ಯಾಯ ದಾಮೋದರ್ ಮಾಸ್ತರ್, ಪಠೇಲ್ ಚಾರಿಟೇಬಲ್ ಅಧ್ಯಕ್ಷ ಬದುರುದ್ದೀನ್ ಪಟೇಲ್ ಭಾಗವಹಿಸಿದ್ದರು.

ಟಿ.ಎಂ.ಶಹೀದ್ ಸ್ವಾಗತಿಸಿ, ಕೆ.ಎಂ.ಮುಸ್ತಾಫ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.