Breaking News

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ವತಿಯಿಂದ 4ನೇ ಉಚಿತ ಆನ್ಲೈನ್ ತರಬೇತಿ ಕಾರ್ಯಾಗಾರ

Advt_Headding_Middle
Advt_Headding_Middle

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಮತ್ತು ಬೀಜದಕಟ್ಟೆ ಅಭಿಮಾನಿಗಳ ಬಳಗ(ನೋಂ) ಬೆಂಗಳೂರು ಜಂಟಿ ಸಹಯೋಗದೊಂದಿಗೆ ಸತತ ನಾಲ್ಕನೇ ಬಾರಿಗೆ ಉಚಿತ ಝೂಮ್ ಆನ್ಲೈನ್ ತರಬೇತಿ ಕಾರ್ಯಾಗಾರ ಸೆ.‌ 19 ರಂದು ಸಾಯಂಕಾಲ 7.30 ರಿಂದ ರಾತ್ರಿ 9.15 ರ ವರೆಗೆ ಆನ್ ಲೈನ್ ಮೂಲಕ ನಡೆಯಲಿದೆ. ಮಕ್ಕಳನ್ನು ಬೆಳೆಸುವ ರೀತಿ ಎಂಬ ವಿಷಯದ ಬಗ್ಗೆ ಪೋಷಕರೊಂದಿಗೆ ಅಂತರರಾಷ್ಟ್ರೀಯ ಖ್ಯಾತಿಯ ತರಬೇತುದಾರರಾದ ವಿ. ಅಶ್ವಥ್ ರಾಮಯ್ಯನವರು ತರಬೇತಿಯನ್ನು ನಡೆಸಿಕೊಡಲಿದ್ದಾರೆ.

ಕಾರ್ಯಾಗಾರದ ಅಧ್ಯಕ್ಷತೆಯನ್ನು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಯವರು ವಹಿಸಲಿದ್ದು ಉದ್ಘಾಟನೆಯನ್ನು ಬಿಎಫ್ಎ 1 (ನೋಂ) ಸದಸ್ಯರು ಹಾಗೂ ಅಮೇರಿಕಾದ ಅರಿಝೋನದಲ್ಲಿ ಉದ್ಯೋಗದಲ್ಲಿರುವ ವಿಲ್ ಫ್ರೆಡ್ ಆoಡ್ರೇಡ್ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ
ಇಂಟರ್ ಪ್ಲೆಕ್ಸ್ ಎಲೆಕ್ಟ್ರಾನಿಕ್ಸ್ ಇಂ. ಪ್ರೈ. ಲಿಮಿಟೆಡ್ ನ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಎಂ.ವಾಸು, ಹೆಚ್.ಆರ್. ಬುಖಾತಿರ್ ಗ್ರೂಪ್ ದುಬೈಯ ಸಹ ವ್ಯವಸ್ಥಾಪಕ ಅಶೋಕ್ ಬೈಲೂರು, ಲಗುನ ಕ್ಲಾತಿಂಗ್ ಬೆಂಗಳೂರು ಇದರ ಮಾನವ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿ ಸದಾಶಿವ, ಎಮಿರೇಟ್ಸ್ ಗ್ರೂಪ್ ದುಬೈ ಇದರ ವ್ಯಾಪಾರ ಅಭಿವೃದ್ಧಿ ವಿಭಾಗದ ವ್ಯವಸ್ಥಾಪಕ ರಿಫಾಯಿ ಪಟೇಲ್ ಗೂನಡ್ಕ ರು ಇವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಹಿರಿಯ ತರಬೇತುದಾರರಾದ ಶೇಖರ್ ಎಂ. ಎಸ್. ಬೆಂಗಳೂರು ಹಾಗೂ ಕು. ಅರ್ವ ಹ್ಯಾರಿಸ್. ಬೆಂಗಳೂರಿನ ನಡೆಸಿಕೊಡಲಿದ್ದಾರೆ.
ಭಾಗವಹಿಸಲು ಆಸಕ್ತಿಯಿದ್ದವರು ಶಶಿಕಾಂತ್ ಮೋ: 9591997651 ಇವರನ್ನು ಸಂಪರ್ಕಿಸಬಹುದೆಂದು ಬೆಂಗಳೂರಿನ ಫಾರ್ಮೇಡ್ ಗ್ರೂಪ್ಸ್ ನ ಹಿರಿಯ ಉಪಾಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.