Breaking News

ಬೆಳ್ಳಾರೆಯಲ್ಲಿ ಅಂಗಡಿಗೆ ನುಗ್ಗಿ ನಗದು ಕಳ್ಳತನ

Advt_Headding_Middle
Advt_Headding_Middle

 

 

ಆರೋಪಿ ಪೊಲೀಸ್ ವಶ – ನ್ಯಾಯಾಂಗ ಬಂಧನ

ಬೆಳ್ಳಾರೆ ಪೇಟೆಯಲ್ಲಿ ರಾತ್ರಿ ಅಂಗಡಿಗೆ ನುಗ್ಗಿ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೆಳ್ಳಾರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೆ.10 ರಂದು ರಾತ್ರಿ ಬೆಳ್ಳಾರೆಯ ಮುಖ್ಯ ಪೇಟೆಯಲ್ಲಿರುವ ಮಾಸ್ಟರ್ ಪ್ಲಾನ್ ಗ್ಲಾಸ್ & ಪ್ಲೈವುಡ್ ಅಂಗಡಿಗೆ ನುಗ್ಗಿದ ಕಳ್ಳ ರೂ.9,500 ನಗದು ಕದ್ದು ಪರಾರಿಯಾಗಿದ್ದ ಈ ಬಗ್ಗೆ ಅಂಗಡಿ ಮಾಲಕರು ಪೊಲೀಸ್ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಸೆ.11 ರಂದು ರಾತ್ರಿ ಕಳ್ಳತನ ಮಾಡಿದ ಆರೋಪಿಯನ್ನು ಪಂಜಿಗಾರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಜಗದೀಶ ಪಾಟಾಜೆ ಎಂಬವವನ್ನು ಬಂಧಿಸಿ ಆತನಿಂದ ಕಳ್ಳತನ ಮಾಡಿದ ರೂ.9,500 ನ್ನು ವಸೂಲಿ ಮಾಡಿದ್ದು ಸೆ.12 ರಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದು ಬಂದಿದೆ.
ಈತ ಗದಗ ಮೂಲದವನೆಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.