Breaking News

ಶಿವಾನಿಯ ಜನನ ತುಂಬಾ ಖುಷಿಯಾಗಿದೆ, ನೋಡಲು ಜೀವ ಎಳೀತಾ ಇದೆ

Advt_Headding_Middle
Advt_Headding_Middle

ಧರ್ಮಸ್ಥಳದ ಆನೆ ದಾನಿ, ಅರಣ್ಯ ಸಚಿವ ಆನಂದ ಸಿಂಗ್ ಪ್ರತಿಕ್ರಿಯೆ

ಧರ್ಮಸ್ಥಳದ ಲಕ್ಷ್ಮೀ ಆನೆ ಹೆಣ್ಣು ಆನೆ ಮರಿಗೆ ಜನ್ಮ ನೀಡಿದ್ದು, ನನಗೂ ತುಂಬಾ ಖುಷಿಯಾಗಿದೆ. ಅದನ್ನು ನೋಡಲು ಜೀವ ಎಳಿತಾ ಇದೆ. ಯಾವಾಗ ಮಂಜುನಾಥ ಕೃಪೆ ಮಾಡಿ ಕರೆಸಿಕೊಳ್ತಾನೋ ಗೊತ್ತಿಲ್ಲ. ಆದಷ್ಟು ಶೀಘ್ರ ಧರ್ಮಸ್ಥಳಕ್ಕೆ ಹೋಗಿ ಶಿವಾನಿ ಜೊತೆ ಸ್ವಲ್ಪ ಕಾಲ ಕಳೆಯಲಿದ್ದೇನೆ ಎಂದು ಧರ್ಮಸ್ಥಳಕ್ಕೆ ಲಕ್ಷ್ಮೀ ಆನೆಯನ್ನು ಕೊಡುಗೆಯಾಗಿ ನೀಡಿದ್ದ ಬಳ್ಳಾರೆಯ ಹೊಸಪೇಟೆ ಶಾಸಕ, ರಾಜ್ಯ ಅರಣ್ಯ ಮತ್ತು ಪರಿಸರ ಜೀವಿಶಾಸ್ತ್ರ ಸಚಿವ ಆನಂದ ಸಿಂಗ್ ಪ್ರತಿಕ್ರಿಯಿಸಿದ್ದಾರೆ.


ಸುದ್ದಿ ಲೈವ್ ನ್ಯೂಸ್ ಬುಲೆಟಿನ್‌ನಲ್ಲಿ ಸಚಿವರನ್ನು ಸಂಪರ್ಕಿಸಿದ ವೇಳೆ ಪ್ರತಿಕ್ರಿಯಿಸಿದ ಅವರು ನೀವು ಮಾಡಿರುವ ಡಾಕ್ಯುಮೆಂಟರಿ ನೋಡಿದ್ದೇನೆ. ಲಕ್ಷ್ಮೀ ಆನೆಯನ್ನು ಸ್ನೇಹಿತರು ಅಸ್ಸಾಂನ ಗುವಾಹಟಿಯಿಂದ ತರಿಸಿದ್ದು, ಧರ್ಮಸ್ಥಳಕ್ಕೆ ನೀಡಲಾಗಿತ್ತು. ಶಿವಾನಿಯ ಮೇಲೆ ಮಂಜುನಾಥನ ಕೃಪೆ ಇರಲಿ ಅಂತ ಆಶಿಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆನೆ ನೀಡಿದ್ದನ್ನು ಸಚಿವರು ಸ್ಮರಿಸಿಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.