ಪಂಜದ ಪುಟಾಣಿಯ ವೀಡಿಯೋ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ ಪುನೀತ್ ರಾಜ್‌ಕುಮಾರ್

Advt_Headding_Middle
Advt_Headding_Middle


ಪಂಜ ಮೂಲದ ಪುಟಾಣಿಯ ಪ್ರತಿಭೆಯ ವೀಡಿಯೋವೊಂದನ್ನು ಖ್ಯಾತ ಚಿತ್ರನಟ ಪುನೀತ್ ರಾಜ್‌ಕುಮಾರ್ ತನ್ನ ಫೇಸ್‌ಬುಕ್ ಫೇಜ್‌ನಲ್ಲಿ ಪೋಸ್ಟ್ ಮಾಡಿದ್ದು, ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಪಂಜದ ಉದ್ಯಮಿ ವೆಂಕಟ್ರಮಣ ಭಟ್ ಸಂಗಾತಿ ಮತ್ತು ಶಶಿಕಲಾ ದಂಪತಿಯ ಪುತ್ರ, ಬೆಂಗಳೂರಿನಲ್ಲಿ ನೆಲೆಸಿರುವ ಇಂಜಿನಿಯರ್ ಆದಿತ್ಯ ಹಾಗೂ ಇಂಜಿನಿಯರ್ ಪೂನಂ ದಂಪತಿಯ ಪುತ್ರ ನಾಲ್ಕು ವರ್ಷ ಪ್ರಾಯದ ಆಕಾಶ್, ಡಾ. ರಾಜ್‌ಕುಮಾರ್ ಅಭಿನಯದ ಬಬ್ರುವಾಹನ ಚಲನಚಿತ್ರದ ಸಂಭಾಷಣೆಯನ್ನು ಅಭಿನಯಿಸಿದ್ದು, ಅದನ್ನು ವೀಡಿಯೋ ಮಾಡಲಾಗಿತ್ತು. ಅದನ್ನು ಹೆತ್ತವರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹಾಕಿದ್ದರು. ಇದನ್ನು ಗಮನಿಸಿದ ಪತ್ರಕರ್ತ ಹಾಗೂ ಸಾಹಿತಿ ಜೋಗಿಯವರು ಈ ವೀಡಿಯೋ ದೃಶ್ಯವನ್ನು ಪುನೀತ್‌ರಾಜ್‌ಕುಮಾರ್ ಅವರಿಗೆ ಕಳುಹಿಸಿದ್ದರು. ಅವರು ಇಂದು ಬೆಳಿಗ್ಗೆ ಅದಕ್ಕೆ ತನ್ನ ಮೆಚ್ಚುಗೆಯ ಮಾತುಗಳನ್ನು ಸೇರಿಸಿ ಅದನ್ನು ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅದೀಗ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಇತ್ತೀಚೆಗಷ್ಟೇ ಇದೇ ಪುಟಾಣಿ ಚೆಂಡೆ ಬಾರಿಸುವ ವೀಡಿಯೋವೊಂದು ಕೂಡಾ ವೈರಲ್ ಆಗಿತ್ತು. ಆಕಾಶ್ ಬೆಂಗಳೂರಿನ ದಿಲ್ಲಿ ಸ್ಕೂಲ್‌ನಲ್ಲಿ ಎಲ್‌ಕೆಜಿ ವಿದ್ಯಾರ್ಥಿ.

ಪುಟ್ಟ ಅಭಿಮಾನಿ 👌

Posted by Puneeth Rajkumar on Saturday, September 12, 2020

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.