Breaking News

ಪಂಜ ಚಿಂಗಾಣಿಗುಡ್ಡೆ ಮಕ್ಕಳ ಭಜನಾ ತರಬೇತಿ ಶಿಬಿರ ಸಮಾರೋಪ

Advt_Headding_Middle
Advt_Headding_Middle

ಜೈಕರ್ನಾಟಕ ಯುವಕ ಮಂಡಲ (ರಿ.), ಕೃಪಾ ಯುವತಿ ಮಂಡಲ (ರಿ.) ಹಾಗೂ ಶ್ರೀ ಶಾರದಾಂಬಾ ಭಜನಾ ಮಂದಿರ (ರಿ.) ಪಂಜ ಇವುಗಳ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಇದರ ಸಹಯೋಗದೊಂದಿಗೆ ಎರಡು ದಿನಗಳ ಭಜನಾ ತರಬೇತಿ ಕಮ್ಮಟವನ್ನು ಅಳ್ಪೆ ಚಿಂಗಾಣಿಗುಡ್ಡೆಯಲ್ಲಿ ನಡೆಸಿದ್ದು, ಸುಮಾರು 56 ಶಿಬಿರಾರ್ಥಿಗಳು 45 ಯುವಕ & ಯುವತಿ ಮಂಡಲ ಮತ್ತು ಭಜನಾ ಮಂಡಳಿಯ ಸದಸ್ಯರು, 25 ಸಾರ್ವಜನಿಕರು ಪಾಲ್ಗೊಂಡಿದ್ದರು.

ತರಬೇತಿಯನ್ನು ಹಿರಿಯ ‌ಭಜನಾ ತರಬೇತುದಾರರಾದ ಶ್ರೀಮತಿ ಉಷಾ ಚಂದ್ರ ಮುಳಿಯ ಉಪ್ಪಿನಂಗಡಿ,  ರಮೇಶ್ ಮೆಟ್ಟಿನಡ್ಕ, ಶ್ರೀಮತಿ ರಮ್ಯಾದಿಲಿಪ್ ಬಾಬ್ಲುಬೆಟ್ಟು ನಿರ್ವಹಿಸಿದ್ದರು. ಎರಡು ದಿನಗಳ ಈ ಕಮ್ಮಟದಲ್ಲಿ ಶಿಬಿರಾರ್ಥಿಗಳಿಗೆ ಭಜನೆ ಹಾಡುಗಳು ಮತ್ತು ಕುಣಿತ ಭಜನೆಯನ್ನು ಕೂಡಾ ತರಬೇತಿ ನೀಡಲಾಯಿತು.
ಶಿಬಿರಾರ್ಥಿಗಳೊಂದಿಗೆ ಪೋಷಕರು ಕೂಡಾ ಬಾಗವಹಿಸಿದ್ದು ಈ ಶಿಬಿರದ ವಿಷೇಶ‌. ಎರಡು ದಿನದ ಈ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಊಟ ಉಪಹಾರದ ವ್ಯವಸ್ಥೆಯನ್ನು ಉಚಿತವಾಗಿ ನೀಡಲಾಯಿತು.


ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನಾ ಸೀತಾರಾಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಬಿ.ಸಿ ಟ್ರಸ್ಟ್(ರಿ.) ಸುಳ್ಯ ಇದರ ಯೋಜನಾಧಿಕಾರಿಗಳಾದ  ಸಂತೋಷ್ ಕುಮಾರ್ ರೈ ಆಗಮಿಸಿದ್ದರು. ಸಭಾಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಲೋಕೇಶ್ ಕೋಡಿ ವಹಿಸಿದ್ದರು. ವೇದಿಕೆಯಲ್ಲಿ ತರಬೇತುದಾರರಾದ  ರಮೇಶ್ ಮೆಟ್ಟಿನಡ್ಕ, ತಬಲಾ ವಾದಕರಾದ  ಆರ್ಯ ಬಾಬ್ಲೂಬೆಟ್ಟು, ಸುಳ್ಯ ತಾಲೂಕು ಭಜನಾ ಪರಿಷತ್ತಿನ ಗೌರವ ಅಧ್ಯಕ್ಷರಾದ  ವಿಶ್ವನಾಥ ರೈ ಅರ್ಗುಡಿ, ಯುವತಿ ಮಂಡಲದ ಅಧ್ಯಕ್ಷರಾದ ಶ್ರೀಮತಿ ಜಲಜಾಕ್ಷಿ ಕೋಡಿ, ಕಾರ್ಯಕ್ರಮ ನಿರ್ದೇಶಕ ದೇವಿಪ್ರಸಾದ್ ಕಡೆಪಳ, ಯುವಕ ಮಂಡಲದ ಕಾರ್ಯದರ್ಶಿ ಪವನ್ ಬನ, ಯುವತಿ ಮಂಡಲದ ಕಾರ್ಯದರ್ಶಿ ಶ್ರೀಮತಿ ಮೀನಾಕ್ಷಿ ಕೋಡಿ ಉಪಸ್ಥಿತರಿದ್ದರು.

ಭಾಗವಹಿಸಿದ ಶಿಭಿರಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ಅತಿಥಿಗಳು ವಿತರಿಸಿದರು. ಉತ್ತಮ ಶಿಭಿರಾರ್ಥಿಗಳಾಗಿ ಕು. ಜಯಶ್ರೀ ಬನ ಮತ್ತು ಸಾಯಿ ಶ್ರವಣ ಸಾಯಿಕೃಪಾ ಮೂಡಿ ಬಂದರು.
ಕುಸುಮಾಧರ ಕರಿಮಜಲು ಸ್ವಾಗತಿಸಿ, ರತನ್ ಕುಮಾರ್ ಶೇಡಿಗುಂಡಿ ವಂದಿಸಿದರು.
ಶ್ರೀಮತಿ ತೀರ್ಥಾಕ್ಷಿ ಕೋಟ್ಯಡ್ಕ ಪ್ರಾರ್ಥಿಸಿ, ಗುರುಪ್ರಸಾದ್ ತೋಟ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.