ಸರಕಾರದ ಯೋಜನೆಯ ಮನೆ ನಿರ್ಮಾಣ ಕಾಮಗಾರಿಗಳ ಹಣ ಮಂಜೂರು ಗೊಳಿಸಲು ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮನವಿ

Advt_Headding_Middle
Advt_Headding_Middle

 

ಗ್ರಾಮ ಪಂಚಾಯತ್ ಮೂಲಕ ಆಶ್ರಯ, ಅಂಬೇಡ್ಕರ್, ಬಸವ ವಸತಿ ಯೋಜನೆಯಡಿಯಲ್ಲಿ ಮನೆ ಮಂಜೂರಾಗಿ ಪಂಚಾಂಗ, ಗೋಡೆ,ಛಾವಣಿ ಹಂತದವರೆಗೂ ಆಗಿರುವ ಹಲವಾರು ಮನೆಗಳಿಗೆ ಹಣ ಮಂಜೂರಾತಿ ಆಗದೇ ಫಲಾನುಭವಿ ಸಂಕಷ್ಟಕ್ಕೆ ಒಳಗಾಗಿರುವ ವಿಚಾರದಲ್ಲಿ ತಕ್ಷಣ ಹಣ ಮಂಜೂರಾತಿ ಗೊಳಿಸಲು ಮತ್ತು 2 ವರುಷಗಳಿಂದ ಯಾವುದೇ ಹೊಸ ಮನೆಗಳು ಮಂಜೂರಾತಿ ಆಗಿರದೇ ಇರುವುದರ ಬಗ್ಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಪ್ರಕಾಶ್ ರೈ ಯವರ ನೇತೃತ್ವದಲ್ಲಿ ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಯವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಮನೆ ಮಂಜೂರಾತಿ ಮತ್ತು ಹಣ ಪಾವತಿ ಬಾಕಿ ಹಣ ತಕ್ಷಣ ನೀಡಲು ಸರಕಾರದ ಗಮನಕ್ಕೆ ತರಲು ಮನವಿ ಮಾಡಿದ್ದಾರೆ.

ಈ ನಿಯೋಗದಲ್ಲಿ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಹಮೀದ್ ಜಿ.ಕೆ, ತಾಲೂಕು ಪಂಚಾಯತ್ ಸದಸ್ಯ ತೀರ್ಥರಾಮ ಜಾಲ್ಸೂರು ,ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ , ಬೆಳ್ಳಾರೆ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿ ಬಾಗಿಲು, ನಂದರಾಜ್ ಸಂಕೇಶ್, ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಆನಂದ ಬೆಳ್ಳಾರೆ, ಸದಾನಂದ ರೈ, ಎಸ್.ಕೆ ಹನೀಫ್, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.