Breaking News

ಗುರು ಪ್ರಕಾಶ್ ಕೇಬಲ್ ಮಾಲಕ ಗುರುದತ್ ನಾಯಕ್ ನಿಧನ

Advt_Headding_Middle
Advt_Headding_Middle

ಸುಳ್ಯದ ಗುರು ಪ್ರಕಾಶ್ ಕೇಬಲ್ ನೆಟ್ ವರ್ಕ್ ಮಾಲಕ, ಹಿರಿಯ ಉದ್ಯಮಿ ಹಾಗೂ ಕ್ರೀಡಾ ಪ್ರೋತ್ಸಾಹಕ ಗುರುದತ್ ನಾಯಕ್ ರವರು ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ ಸುಮಾರು 54 ವರ್ಷ ವಯಸ್ಸಾಗಿತ್ತು.

ಕಿಡ್ನಿ ಸಮಸ್ಯೆಯಿಂದ ಕೆಲ ಸಮಯದಿಂದ ಬಳಲುತ್ತಿದ್ದ ಅವರಿಗೆ ಡಯಾಲಿಸಿಸ್ ಆರಂಭಿಸಲಾಗಿತ್ತು. ವಾರದ ಹಿಂದೆ ಅಸೌಖ್ಯ ಉಲ್ಬಣಗೊಂಡಿತ್ತು. ಅವರ ಅಂತ್ಯ ಸಂಸ್ಕಾರ ನಾಳೆ ಬೆಳಿಗ್ಗೆ ನಡೆಯುವುದೆಂದು ತಿಳಿದುಬಂದಿದೆ.
ಅವರು ಪತ್ನಿ , ಇಬ್ಬರು ಪುತ್ರರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಸುಳ್ಯದ ಕ್ರೀಡಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಗುರುದತ್ ನಾಯಕ್
ಸುಳ್ಯದಲ್ಲಿ ಕೇಬಲ್ ನೆಟ್ ವರ್ಕ್ ಸ್ಥಾಪಿಸುವ ಮೂಲಕ ದೃಶ್ಯ ಮಾಧ್ಯಮ ರಂಗಕ್ಕೆ ಕೊಡುಗೆ ನೀಡಿರುವ ಗುರುದತ್ ನಾಯಕ್ ರವರು ಕ್ರೀಡಾಪಟುವಾಗಿ, ಕ್ರೀಡಾ ಪ್ರೋತ್ಸಾಹಕರಾಗಿ ಸುಳ್ಯದ ಕ್ರೀಡಾಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮೊದಲು ಕ್ರಿಕೆಟ್ ಆಟಗಾರ ರಾಗಿದ್ದ ಗುರುದತ್ ರವರು ಬಳಿಕ ವಾಲಿಬಾಲ್ ಆಟಗಾರರಾಗಿಯೂ ಸಕ್ರಿಯರಾದರು. ಸುಳ್ಯದಲ್ಲಿ ವಾಲಿಬಾಲ್ ಆಟ ಪುನಶ್ಚೇತನಗೊಂಡು ಸಾಂಘಿಕವಾಗಿ ಸಂಘಟನೆಗೊಳ್ಳಲು ಗುರುದತ್ ಕಾರಣರಾದರು. ವಾಲಿಬಾಲ್ ತಂಡ ಕಟ್ಟಲು ಆಸಕ್ತ ಯುವಕರನ್ನು ಸ್ವಂತ ಖರ್ಚಲ್ಲಿ ಒಟ್ಟು ಸೇರಿಸಿ ಆಡಿಸುತ್ತಿದ್ದರು. ಎಲ್ಲಿ ಕ್ರಿಕೆಟ್ ಟೂರ್ನಮೆಂಟ್ ಆಗಲಿ, ವಾಲಿಬಾಲ್ ಪಂದ್ಯಾಟವಾಗಲಿ ಅಲ್ಲಿಗೆ ತಮ್ಮ ತಂಡ ಕಳುಹಿಸುತ್ತಿದ್ದರು. ಕ್ರೀಡಾಕೂಟಗಳಿಗೆ ಪ್ರಾಯೋಜಕತ್ವ ನೀಡುತ್ತಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.