Breaking News

ಬಿಡುವಿನ ಸಮಯದಲ್ಲಿ ಮೂಡಿತು ಆಕರ್ಷಕ ಚಿತ್ತಾರ

Advt_Headding_Middle
Advt_Headding_Middle

ಲಾಕ್ ಡೌನ್‌ ಸಮಯವನ್ನು‌ ಚಿತ್ರಕಲೆಗೂ ಮೀಸಲಿಟ್ಟ ವಿದ್ಯಾರ್ಥಿನಿ

ಲಾಕ್ ಡೌನ್ ಸಮಯವನ್ನು ಹೇಗಾಪ್ಪ ಕಲೆಯುವುದು ಎಂಬ ಚಿಂತೆ ಒಂದೆಡೆಯಾದರೆ, ಶಾಲಾಕಾಲೇಜುಗಳು ತೆರೆಯದೇ ಆನ್ ಲೈನ್ ಕ್ಲಾಸ್ ಗಳಿಗೆ ಮೊರೆಯಾಗಬೇಗಿ ಬಂದು ನೆಟ್ ವಕ್ ೯ ಸಮಸ್ಯೆಗಳನ್ನು ಎದುರಿಸಿದ ಪರಿ ಇನ್ನೊಂದೆಡೆ. ಅದರಲ್ಲೂ ಕೆಲವು ಯುವಕ‌ ಯುವತಿಯರು ತಮ್ಮ ಮೊಬೈಲ್ ನಲ್ಲೇ ಕಾಲ ಕಳೆಯುತ್ತಾ ತಮ್ಮ ಅಮೂಲ್ಯ ಸಮಯ ಹಾಳು ಮಾಡುತ್ತಿರುವಾಗ ಇಲ್ಲೊಬ್ಬಳು ಯುವತಿ ಆನ್ ಲೈನ್ ತರಗತಿಗಳ ಮಧ್ಯೆ ಚಿತ್ರಕಲೆ ಕಲಿಯುವುದರ ಮೂಲಕ ಲಾಕ್ ಡೌನ್ ಸಮಯವನ್ನು ಸದುಪಯೋಗಿಸಿಕೊಂಡಿದ್ದಾಳೆ.

ಹೌದು. ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪಾಲದ ಶ್ರದ್ಧಾ ಎಂಬ ಯುವತಿಯೇ ಲಾಕ್ ಡೌನ್ ಸಮಯವನ್ನು ಚಿತ್ರಕಲೆಗೆ ಉಪಯೋಗಿಸಿದ ಯುವತಿ. ಈಕೆ ಶಿವಮೊಗ್ಗದಲ್ಲಿ ಬಿಎಸ್ಸಿ ನರ್ಸಿಂಗ್ ತರಬೇತಿ ನಡೆಸುತ್ತಿದ್ದಾಳೆ. ಲಾಕ್ ಡೌನ್ ಹೇರಿಕೆಯಾದ ಬಳಿಕ ಮನೆಯಲ್ಲಿಯೇ ಆನ್ ಲೈನ್‌ತರಗತಿಗಳು ನಡೆಯುತ್ತಿದೆ. ಇದರ ನಡುವೆ ಈಕೆಗೆ ಚಿತ್ರಕಲೆಯತ್ತ ಆಸಕ್ತಿ ಮೂಡಿದೆ. ಶ್ರದ್ಧಾಳಿಗೆ ಚಿಕ್ಕಂದಿನಿಂದಲೇ ಚಿತ್ರಕಲೆಯಲ್ಲಿ ಒಲವು ಇತ್ತು. ಹೀಗಾಗಿ ಬಿಡುವು ಇದ್ದಾಗ ಯೂಟ್ಯೂಬ್ ನೋಡಿ ಚಿತ್ರಕಲೆ ಕಲಿತಿದ್ದಾಳೆ. ಮನೆಯ ಗೋಡೆಗಳಲ್ಲಿಯೂ ಈಕೆಯ ಕೈಯಿಂದ ಚಿತ್ರಗಳು ಅರಳಿವೆ. ಯಕ್ಷಗಾನ, ವಿವಿಧ ಹೂವುಗಳು, ಪ್ರಕೃತಿ ಸೇರಿದಂತೆ ಹತ್ತಾರು ಚಿತ್ರಗಳು ಚಿತ್ತಾಕರ್ಷವಾಗಿ ಈಕೆಯ ಕೈಗಳಿಂದ ಮೂಡಿ ಬಂದಿದೆ.


ಈಕೆ ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪಾಲ ನಿವಾಸಿ ಬೊಳ್ಳಾಜೆ ಅಂಚೆ ಕಚೇರಿ ಅಂಚೆಪಾಲಕ ಕೇಶವ ಮತ್ತು ಶ್ರೀಮತಿ ನಳಿನಿ ದಂಪತಿಗಳ ಪುತ್ರಿ. ಸಹೋದರಿ ಶ್ರೇಯ ಪ್ರಥಮ ವರ್ಷದ ಪಿ.ಯು. ವಿದ್ಯಾರ್ಥಿ ನಿ.

ಮೊದಲಿನಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಇತ್ತು. ಈಗ ಲಾಕ್ ಡೌನ್ ಇದ್ದ ಕಾರಣ ಸಮಯ ಸಿಕ್ಕಾಗ ಚಿತ್ರ ಬಿಡಿಸುವುದಕ್ಕೆ ಅವಕಾಶ‌ ಸಿಕ್ಕಿದೆ.
– ಶ್ರದ್ಧಾ ಬಿ.ಕೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.