ಅಮರ ಸಂಘಟನಾ ಸಮಿತಿ ವತಿಯಿಂದ ಗೋವಿಗಾಗಿ ಮೇವು ಕಾರ್ಯಕ್ರಮ

Advt_Headding_Middle
Advt_Headding_Middle

ಅಮರ ಸಂಘಟನಾ ಸಮಿತಿ, ಅಮರ ಮುಡ್ನೂರು ಮತ್ತು ಪಡ್ನೂರು ಇದರ ಆಶ್ರಯದಲ್ಲಿ ಗೋವುಪ್ರೇಮಿಗಳ ಸಹಕಾರದೊಂದಿಗೆ, ಗೋವಿಗಾಗಿ ಮೇವು ಎಂಬ ವಿಶೇಷ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಹನುಮಗಿರಿ ಈಶ್ವರಮಂಗಲದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರ ಸಂಘಟನಾ ಸಮಿತಿ ಅಧ್ಯಕ್ಷರಾದ ಶಿವಪ್ರಸಾದ್ ದೊಡ್ಡಿಹಿತ್ಲು ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆ ಇದರ ಅಧ್ಯಕ್ಷರಾದ ಡಾ| ಕೃಷ್ಣಪ್ರಸನ್ನ ನೆರವೇರಿಸಿದರು.

ಕ್ಷೇತ್ರದ ಧರ್ಮದರ್ಶಿಗಳಾದ ನನ್ಯ ಅಚ್ಚುತ ಮೂಡೆತ್ತಾಯ ಅವರು ಧಾರ್ಮಿಕ ಉಪನ್ಯಾಸ ಮಾಡಿದರು. ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ಅನಿಲ್ ಪೂಜಾರಿಮನೆ, ಶಿವರಾಮ.ಪಿ ಈಶ್ವರಮಂಗಲ, ಪ್ರದೀಪ್ ಬೊಳ್ಳೂರು ಸ್ಥಾಪಕಾಧ್ಯಕ್ಷರು ಅಮರ ಸಂಘಟನಾ ಸಮಿತಿ, ತಾಲೂಕು ಜಲ, ಪರಿಸರ ಸಂರಕ್ಷಣಾ ಪ್ರಮುಖ್, ರಾಷ್ಟ್ರೀಯ ಸ್ವಯಂಸೇವಕ ಸಂಘ, ಸುಳ್ಯ ತಾಲೂಕು ಇವರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕ್ಷೇತ್ರದ ಗೋಶಾಲೆಗೆ ಸುಮಾರು ೧೦೦೦೦ ಮೌಲ್ಯದ ಮೇವನ್ನು ಹಸ್ತಾಂತರಿಸಲಾಯಿತು.
ಸಂಘಟನೆಯ ಸದಸ್ಯರಾದ ಸಾಯಿಶೃತಿ ಕಾರ್ಯಕ್ರಮ ನಿರೂಪಿಸಿದರು, ಸಂಘಟನೆಯ ಕಾರ್ಯದರ್ಶಿ ಶಶಿಕಾಂತ್ ಮಿತ್ತೂರು ಸ್ವಾಗತಿಸಿ, ಜಯಪ್ರಸಾದ್ ಸಂಕೇಶ ವಂದಿಸಿದರು. ಸುಶ್ಮಿತಾ ಕಡಪಳ ಪಾರ್ಥನೆ ನೆರವರೆಸಿದರು, ಶ್ರೀಮತಿ ರಶ್ಮಿ ರಜನಿಕಾಂತ್ ಹೂಗುಚ್ಛ ನೀಡಿ, ಹಾಗೂ ಚೇತನ್ ಕೊಯಿಂಗುಳಿ ಮತ್ತು ಕಿರಣ್ ಕೊಂಡೆಬಾಯಿ ವಾಹನ ಸೌಲಭ್ಯ ನೀಡಿ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.