Breaking News

ಕಲ್ಲಪ್ಪಳ್ಳಿ : ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ

Advt_Headding_Middle
Advt_Headding_Middle

ಪನತ್ತಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯು ಕಂದಾಯ ಸಚಿವ ಚಂದ್ರಶೇಖರನ್ ಅವರಿಂದ ನಡೆಯಿತು.


ಪಾಣತ್ತೂರು-ಕಲ್ಲಪ್ಪಳ್ಳಿ ರಸ್ತೆಯ ೩ಕಿಮೀ ನಿಂದ 6 ಕಿ.ಮೀ. ವರೇಗೆ ೩ಕೋಟಿ ರೂಪಾಯಿ ಗಳಲ್ಲಿ ಪೂರ್ತಿಗೊಂಡ ರಸ್ತೆಯ ಉದ್ಘಾಟನೆ,
ಊಡಿಯಾರದಲ್ಲಿ 68 ಲಕ್ಷ ರೂಪಾಯಿ ಅನುದಾನಲ್ಲಿ ಪೂರ್ತಿ ಗೊಂಡ ವೆಂಟಿಲೇಟರ್ ಬ್ರಿಡ್ಜ್ ನ ಉದ್ಘಾಟನೆ, ಕಮ್ಮಾಡಿ ರಸ್ತೆಯ ಹಂದಿ ಪಾರೆ ಹೊಳೆಗೆ 98.75 ಲಕ್ಷ ರೂಪಾಯಿಗಳ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ, ಪಾಣತ್ತೂರು-ಕಲ್ಲಪ್ಪಳ್ಳಿ ರಸ್ತೆಯ ಉಳಿದ  1೦ಕಿಮೀ ವರೇಗೆ 3.74 ಕೋಟಿ ರೂಪಾಯಿ ಗಳ ಕಾಮಗಾರಿಗೆ ಶಂಕುಸ್ಥಾಪನೆ, ಹೀಗೆ 8.5೦ ಕೋಟಿ ರೂಪಾಯಿಗಳ ಪದ್ಧತಿಯ ಉದ್ಘಾಟನೆಯನ್ನು ಸಚಿವರು ನೆರವೇರಿಸಿದರು.

ಕಮ್ಮಾಡಿ ರಸ್ತೆ ಯ ಕಾಮಗಾರಿಗೆ ಈಗಾಗಲೇ ೫ಕೋಟಿ ರೂಪಾಯಿಗಳ ಆಡಳಿತಾತ್ಮಕ ಅನುಮತಿ ದೊರಕಿದ್ದು ಇದರ ಟೆಂಡರ್ ಪ್ರಕ್ರಿಯೆಯೆ ಸಹ ಬೇಗನೇ ನಡೆಯಲಿದೆ. ಎಂದು ಸಚಿವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪನತ್ತಡಿ ಗ್ರಾಮಪಂಚಾಯತಿನ ಅಧ್ಯಕ್ಷರಾದ ಪಿ ಜಿ ಮೋಹನ್ ರವರು ನಿರ್ವಿಸಿದರು. ಪರಪ್ಪ ಬ್ಲಾಕ್ ಪಂಚಾಯತ್ ಪಿ. ರಾಜನ್ ವಿಶಿಷ್ಟ ಆಹ್ವಾನಿತರಾಗಿದ್ದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಪದ್ಮಾವತಿ. ಯಂ ನಾರಾಯಣ, ಪನತ್ತಡಿ ಗ್ರಾಮಪಂಚಾಂiತಿನ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಯಂ ಸಿ ಮಾದವ, ಶ್ರೀಮತಿ ರಜನೀ ದೇವಿ, ಪಿ. ತಂಬಾನ್, ಬ್ಲಾಕ್ ಪಂಚಾಯತ್ ಸದಸ್ಯರಾದ ಶ್ರೀಮತಿ ಲತಾ ಅರವಿಂದನ್, ಕುಟುಂಬ ಶ್ರೀ, ಸಿಡಿಯಸ್ ಶ್ರೀಮತಿ ಮಾಧವಿ ರಾಜನ್, ವಿವಿಧ ರಾಜಕೀಯ ಪ್ರತಿನಿಧಿಗಳಾದ ಬಿ ಮೋಹನ್ ಕುಮಾರ್, ಕೆಜೆ ಜೇಮ್ಸ್, ಮತ್ತು ವಾರ್ಡಿನ ವಿಕಸನ ಸಮಿತಿಯ ಕನ್ವೀನರ್ ಅರುಣ್ ರಂಗತ್ತಮಲೆ, ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮಕ್ಕೆ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಹೇಮಾಂಬಿಕ ಸ್ವಾಗತಿಸಿ, ಪಂಚಾಯತ್ ಸದಸ್ಯೆ ಶ್ರೀಮತಿ ನಳಿನಾಕ್ಷಿ ದಾಮೋದರ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.