ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಿನಕ್ಕೆ 225 ಆಶ್ಲೇಷ ಪೂಜೆ ಮಾಡಲು ಅವಕಾಶ : ರೂಪಾ ಎಂ. ಜೆ.

Advt_Headding_Middle
Advt_Headding_Middle

 

 

ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಿನಕ್ಕೆ 225 ಆಶ್ಲೇಷ ಪೂಜೆ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ರೂಪಾ ಎಂ. ಜೆ.ಯವರು ತಿಳಿಸಿದ್ದಾರೆ.

ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದ್ದು ಕಾಮಗಾರಿ ವೀಕ್ಷಣೆ ಮಾಡಿ ದೇವಸ್ಥಾನದ ಆಡಳಿತ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ  ತಿಳಿಸಿದರು.
ಪೂಜೆಗಳ ಬಗ್ಗೆ ಮಾಹಿತಿ ನೀಡುತ್ತಾ ನಾಳೆಯಿಂದಲೇ ಆಶ್ಲೇಷ ಬಲಿ ಪೂಜೆ ಮೂರು ಬ್ಯಾಚ್ ಮಾಡಿ ತಲಾ 75 ರಂತೆ ದಿನಕ್ಕೆ 225 ಆಶ್ಲೇಷ ಪೂಜೆ ನಡೆಸಲು ಅವಕಾಶ ಕಲ್ಪಿಸಿದ್ದು, ಬೆಳಗ್ಗೆ ಎರಡು ಬ್ಯಾಚ್, ಸಂಜೆ ಒಂದು ಬ್ಯಾಚ್ ಅಶ್ಲೇಷ ಪೂಜೆ ನಡೆಸಲಾಗುವುದು ಎಂದರು. ಆನ್‌ಲೈನ್ ಮುಖಾಂತರ ಆಶ್ಲೇಷ ಪೂಜೆ ಬುಕಿಂಗ್ ಮಾಡಲು ಅವಕಾಶ ನೀಡುವ ಬಗ್ಗೆ ಆಲೋಚಿಸಲಾಗಿದೆ ಎಂದರು . ಸರ್ಪ ಸಂಸ್ಕಾರ ಈಗಾಗಲೇ 3107 ಬುಕ್ಕಿಂಗ್ ಮಾಡಿದ್ದು ಇದ್ದು ಮುಂದಿನ ದಿನಗಳಲ್ಲಿ ಬುಕ್ಕಿಂಗ್ ಮಾಡಿದವರನ್ನು ಒಂದಿಷ್ಟು, ನೇರ ಬಂದು ಸರ್ಪ ಸಂಸ್ಕಾರ ಮಾಡಿಸುವವರಿಗೂ ಅವಕಾಶ ಮಾಡಿ ಕೊಡಲಾಗುವುದು ಎಂದರು. ಸುಬ್ರಹ್ಮಣ್ಯ ಕಮರ್ಷಿಯಲ್ ಕಾಂಪ್ಲೆಕ್ಸ್ ಕೂಡ ನಿರ್ಮಿಸಲು ಟೆಂಡರ್ ಕರೆದು ಮುಂದುವರಿಯಲು ನಿರ್ಧರಿಸಲಾಗಿದೆ ಎಂದರು. ತನಿಖೆಗೆ ಆದೇಶಿಸಲಾದ ಕೆಲ ಕಾಮಗಾರಿಗಳ ರಿಪೋರ್ಟ್ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು . ಬರುವ ಭಕ್ತಾಧಿಗಳಿಗೆ ಆಗುವ ಶೌಚಾಲಯ ಕೊರತೆ ಬಗ್ಗೆ ಗಮನಕ್ಕೆ ತಂದಾಗ ಶೌಚಾಲಯಗಳನ್ನು ತೆರೆದಿರಲು ಸೂಚಿಸುವುದಾಗಿ ತಿಳಿಸಿದರು. ರಸ್ತೆಯಲ್ಲಿ ಬೀದಿ ದೀಪಗಳಿಲ್ಲದ ಕೊರತೆ ಬಗ್ಗೆ ತಿಳಿಸಿದಾಗ ದೇವಸ್ಥಾನದಿಂದ ಕುಮಾರಧಾರ ತನಕ ಬೀದಿ ದೀಪ ಅಳವಡಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು. ದೇವಸ್ಥಾನ ವತಿಯಿಂದ ಹಣ್ಣುಕಾಯಿ, ಬೆಳ್ಳಿ ಅಂಗಡಿಗಳ ಟೆಂಡರ್ ಸಧ್ಯವೇ ಏಲಂ ಮಾಡಲಾಗುವುದು ಎಂದವರು ಮಾಹಿತಿ ನೀಡಿದರು.
ನಿನ್ನೆ ದಿನ ಸೇವಾ ವಿಭಾಗದಲ್ಲಿ ಸರ್ವರ್ ಸಮಸ್ಯೆ ಉಂಟಾಗಿ ಒಂದು ಗಂಟೆ ತಡವಾದ ಕಾರಣ ಗೊಂದಲ ಉಂಟಾಗಿದೆ ಇನ್ನು ಹಾಗಾಗದಂತೆ ನೋಡಿಕೊಳ್ಳುವುದಾಗಿ ಎಂದು ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.