ಬಿದ್ದು ಸಿಕ್ಕಿದ ಲಕ್ಷ ರೂ ಮೌಲ್ಯದ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ ಗುತ್ತಿಗಾರಿನ ಯುವಕ

Advt_Headding_Middle
Advt_Headding_Middle

 

ಬಿದ್ದು ಸಿಕ್ಕಿದ ಲಕ್ಷ ರೂ ಮೌಲ್ಯದ ಚಿನ್ನದ ಸರವನ್ನು ಮರಳಿಸುವ ಮೂಲಕ ಗುತ್ತಿಗಾರಿನ ಯುವಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ನಡುಗಲ್ಲಿನಿಂದ ಗುತ್ತಿಗಾರು ಮಾರ್ಗವಾಗಿ ಪಂಜಕ್ಕೆ ಹೋಗುತ್ತಿದ್ದ ನವರತ್ನ ಮೊಬೈಲ್ ಶಾಪ್ ನ ಮಾಲಕ ಪ್ರದೀಪ್ ಅಂಬೆಕಲ್ಲು ರವರ ಸುಮಾರು ಒಂದು ಲಕ್ಷ ಮೌಲ್ಯದ ಚಿನ್ನದ ಸರ ಬಿದ್ದು ಬಿದ್ದು ಹೋದ ಘಟನೆ ನಿನ್ನೆ ನಡೆದಿತ್ತು. ಗುತ್ತಿಗಾರಿನ ಇಂಡಿಯನ್ ಪೆಟ್ರೋಲ್ (ಮಾತಾ)ಪಂಪಲ್ಲಿ ಪೆಟ್ರೋಲ್ ತುಂಬಿಸಲು ಬಂದಿದ್ದ ಪೈಕದ ರಾಜ ಸಿ ಹೆಚ್ ರವರ ಮಗ ಆಶಾಕಿರಣ್ ಪೈಕ ರವರಿಗೆ ಈ ಸರ ಸಿಕ್ಕಿತ್ತು. ಅದನ್ನು ಪೆಟ್ರೋಲ್ ಪಂಪ್ ಸಿಬ್ಬಂದಿಗಳ ಕೈಯಲ್ಲಿ ಕೊಟ್ಟು ಅವರು ಹೋಗಿದ್ದರು.

ಇಂದು ವಾಟ್ಸಾಪ್ ಗ್ರೂಪ್ ನಲ್ಲಿ ಚೈನ್ ಬಿದ್ದು ಹೋಗಿರುವ ಮೇಸೇಜ್ ನೋಡಿ ಪ್ರದೀಪ್ ಅಂಬೆಕಲ್ಲುರವರಿಗೆ ಪೋನ್ ಮಾಡಿ ಚೈನ್ ಸಿಕ್ಕಿರುವ ವಿಷಯ ತಿಳಿಸಿ ಅದನ್ನು ಪೆಟ್ರೋಲ್ ಪಂಪಿನ ಸಿಬ್ಬಂದಿಗಳ ಬಳಿ ಕೊಟ್ಟಿದ್ದೇನೆ ಎಂದು ಪೋನಿನಲ್ಲಿ ತಿಳಿಸಿ ಪ್ರಾಮಾಣಿಕತೆ ಮೆರೆದರು.

ಎರಡು ವರ್ಷಗಳ ಹಿಂದೆ ಮೈಸೂರು ದಸರಾ ಸಮಯದಲ್ಲಿ ನಡೆದು ಕೊಂಡು ಹೋಗುತ್ತಿದ್ದಾಗ ಆಶಾಕಿರಣ್ ಗೆ ಬಿದ್ದು ಸಿಕ್ಕಿದ ಸುಮಾರು ನಲವತ್ತು ಸಾವಿರ ನಗದು ಇದ್ದ ಪರ್ಸ್ ನ್ನು ಅದರ ಮಾಲಕರು ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದರು.

ಇಂದು ಚಿನ್ನದ ಸರ ಹಿಂತಿರುಗಿಸುವ ವೇಳೆ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಸೇರಿದಂತೆ ಪೆಟ್ರೋಲ್ ಪಂಪಿನ ಮಾಲಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.