ಹಾಡು ಹಕ್ಕಿಗೆ ನಮನ

Advt_Headding_Middle
Advt_Headding_Middle

 

ಗಾನ ನಿಲ್ಲಿಸಿದ ಹಾಡುಹಕ್ಕಿ
ಮೌನವಾಯಿತು ಗಾನ ಲಹರಿ…
ಸುದ್ದಿಗಳ ಮೇಲೆ ಸುದ್ದಿಗಳು….
ಅಂತೆ ಕಂತೆಯ ಸುದ್ದಿಗಳಿಗೆ
ಕಿವಿಗೊಡದಿರು ಮನವೆ…
ಮನಸು ಸಾಂತ್ವನಿಸಿದರೂ
ಒಳಗೆಲ್ಲೋ ನೋವಿನ ಮೂಕರಾಗ ಮಿಡಿದಂತೆ ಭಾಸ….!!

ಅದೆಂತಹ ನೋವು ಮನವ ಕಾಡುತ್ತಿರಲಿ,
ಮೌನವಾಗಿ ಗಾನಲೋಕದಿ ತೇಲಿಹೋದಾಗ
ಒಳಗಿನ ನೋವೆಲ್ಲಾ ಮರೆಯಾಗಿ
ತುಟಿಯಲಿ ಸಂತಸದ ನಗುವೊಂದು ಅರಳುತಿತ್ತು!!
ಮನವು ಹಾಯಾಗುತಿತ್ತು!!

ಅದೆಷ್ಟು ವರುಷಗಳ ಗಾನಸಂಭ್ರಮ…
ಗಾನದಿ ಕಳೆದುಹೋದ ಮನಗಳೆಷ್ಟೋ,
ಮನದೊಳಿಟ್ಟು ಪೂಜೆಗೈದ ಹೃದಯಗಳೆಷ್ಟೋ
ಎಲ್ಲಾ ಪ್ರೀತಿಯನು ಮರೆತು
ನಡೆದುದೆಲ್ಲಿಗೆ ನೀನು??

ಮಗುವಿನಂತಹ ಮುಗ್ಧತೆಯಿತ್ತು ನಿನ್ನ ನಡೆನುಡಿಯಲಿ
ಶತ್ರುವಿಗೂ ಪ್ರೀತಿ ಹುಟ್ಟುವ ಮಾಧುರ್ಯತೆಯಿತ್ತು
ನಿನ್ನ ಗಾನಲಹರಿಯಲಿ….
ಆಲಿಸುವ ಲಕ್ಷ ಹೃದಯಗಳ ಬೆಸುಗೆಯಿಂದ ಬಿಡಿಸಿಕೊಂಡು
ಅವಸರದ ಪಯಣವಾದರೂ ಎಲ್ಲಿಗೆ?

ನೀನಿಲ್ಲ ಅನ್ನೋ ಸತ್ಯ
ಅರಗಿಸಿಕೊಳ್ಳಲಾಗುತ್ತಿಲ್ಲ,
ನನ್ನ ಕರ್ಣಗಳಲಿ ಪಿಸುಗುಟ್ಟುವ
ನಿನ್ನ ಮೃದು ಮಧುರ ಸಂಗೀತವನು
ಮರೆಯಲಾಗುತ್ತಿಲ್ಲ,
ಕಂಬನಿಯ ಕೋರಿಕೆಯಿದು,
ಪುಟ್ಟ ಮಗುವಾಗಿ
ಮತ್ತೊಮ್ಮೆ ಹುಟ್ಟಿ ಬಾ ಕರುನಾಡಲಿ!
ಸಂಗೀತ ಸ್ವರಗಳು ಮಾರ್ಧನಿಸಲಿ
ಈ ಪುಣ್ಯ ಮಣ್ಣಲಿ!!

ಪ್ರಮೀಳಾ ರಾಜ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.