ನಿವೃತ್ತ ಶಿಕ್ಷಕ ಜನಾರ್ಧನ ಗೌಡ ವಾಲ್ತಾಜೆ ನಿಧನ

Advt_Headding_Middle
Advt_Headding_Middle

 

ಆಲೆಟ್ಟಿ ಗ್ರಾಮದ ಕೋಲ್ಚಾರು ನಿವಾಸಿ ನಿವೃತ್ತ ಶಿಕ್ಷಕ ವಾಲ್ತಾಜೆ ಜನಾರ್ಧನ ಗೌಡ ವಾಲ್ತಾಜೆಯವರು ಸೆ.25 ರಂದು ಹೃದಯಾಘಾತದಿಂದ ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.


ಅವರಿಗೆ ಸಂಜೆ ಮನೆಯಲ್ಲಿರುವ ವೇಳೆಯಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು ಕುಳಿತಲ್ಲಿಯೇ ಕುಸಿದು ಬಿದ್ದರು. ತಕ್ಷಣ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ. ಅವರು ಶಿಕ್ಷಕರಾಗಿ ಕೋಲ್ಚಾರು ದ.ಕ.ಜಿ.ಪಂ.ಸ.ಉ.ಹಿ.ಪ್ರಾಥಮಿಕ ಶಾಲೆಯಲ್ಲಿ 29 ವರ್ಷಗಳ ಕಾಲ ಸೇವೆ ಸಲ್ಲಿಸಿ 2012 ರಲ್ಲಿ ವೃತ್ತಿಯಿಂದ ನಿವೃತ್ತಿ ಹೊಂದಿದ್ದರು.ತನ್ನ ಸೇವಾವಧಿಯಲ್ಲಿ ಚೈತನ್ಯ, ಹೊಸಪಠ್ಯ ರಚನೆ, ಸಮನ್ವಯ ಶಿಕ್ಷಣ, ಸಮಾಜ ವಿಜ್ಞಾನ, ಇಂಗ್ಲಿಷ್ ತರಬೇತಿ, ಜೀವನ ವಿಜ್ಞಾನ, ಕ್ರಿಯಾ ಸಂಶೋಧನಾ ತರಬೇತಿ ಹಾಗೂ ಭಾರತ ಸೇವಾದಳ ಮತ್ತು ಭಾರತ ಸ್ಕೌಟ್ಸ್ ತರಬೇತಿ ಶಿಕ್ಷಣ ಪಡೆದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ. ವೃತ್ತಿಯಿಂದ ನಿವೃತ್ತಿ ಹೊಂದಿದ ಬಳಿಕ ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕೋಲ್ಚಾರು ಶ್ರೀ ಶಾರದಾಂಬಾ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಗೌರವ ಸಲಹಾ ಸದಸ್ಯರಾಗಿ, ಗೌಡ ಸಂಘದ ಗ್ರಾಮ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು. ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಮಾಸ್ತರ್ ಆಗಿ ಜನಾನುರಾಗಿಯಾಗಿದ್ದರು. ಇವರು ಕೋಲ್ಚಾರು ಪರಿಸರದಲ್ಲಿ ಅಪಾರ ವಿದ್ಯಾರ್ಥಿಗಳನ್ನು ಹೊಂದಿದ್ದು ಮೆಚ್ಚುಗೆಯ ಗುರುವಾಗಿದ್ದರು.
ಮೃತರು ಪತ್ನಿ ಕೋಲ್ಚಾರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರತ್ನಾವತಿ ವಾಲ್ತಾಜೆ ಮತ್ತು ಓರ್ವ ಪುತ್ರ ಕೆ.ವಿ.ಜಿ.ಇಂಜಿನಿಯರಿಂಗ್ ಸಿವಿಲ್ ವಿಭಾಗದ ವಿದ್ಯಾರ್ಥಿ ಮೋಹಿತ್, ಸಹೋದರ ಮಂಗಳೂರು ಕೆ.ಐ.ಒ.ಸಿ.ಎಲ್. ಉದ್ಯೋಗಿ ಗಂಗಾಧರ ವಾಲ್ತಾಜೆ, ಸಹೋದರಿಯರಾದ ಶ್ರೀಮತಿ ಅನುಸೂಯ ವಾಸುದೇವ ಪೆರುಮುಂಡ, ಮೀನಾಕ್ಷಿ ವಾಲ್ತಾಜೆ ,ನಾದಿನಿ ಶ್ರೀಮತಿ ಪ್ರೇಮ ವಾಲ್ತಾಜೆ ಹಾಗೂ ಕುಟುಂಬಸ್ಥರನ್ನು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.