Breaking News

ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಸುಳ್ಯದಲ್ಲಿ ಚಾಲನೆ

Advt_Headding_Middle
Advt_Headding_Middle

 

 

ಯುವಕರ ಮೂಲಕ ಪಕ್ಷ ಬಲ ಪಡಿಸಲು ಜಿಲ್ಲಾಧ್ಯಕ್ಷ ಮಿಥುನ್ ರೈ ಕರೆ


ಸುಳ್ಯ ತಾಲೂಕಿನ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೂಡಾ ಯುವಕರನ್ನು ಪಕ್ಷಕ್ಕೆ ಸೇರಿಸಿಕೊಂಡು ಪಕ್ಷ ಗಟ್ಟಿಗೊಳಿಸಬೇಕು. ಸದಸ್ಯತ್ವ ಅಭಿಯಾನದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಂಡ ಸಂಘಟನೆ ಬೆಳೆಸಬೇಕು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಹೇಳಿದರು.

ಸೆ.26 ರಂದು ಸುಳ್ಯದ ಸದರ್ನ್ ರೆಸಿಡೆನ್ಸಿ ಯಲ್ಲಿ ನಡೆದ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಮಿಥುನ್ ರೈ ಚಾಲನೆ ನೀಡಿ ಮಾತನಾಡಿದರು.

“ಮುಂದೆ ನಮ್ಮೆದುರು ಗ್ರಾಮ ಪಂಚಾಯತ್ ಚುನಾವಣೆ ಇದೆ. ಈ ನಿಟ್ಟಿನಲ್ಲಿಯೂ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಹೇಳಿದರು.


ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಬುಡ್ಲೆಗುತ್ತು, ಯುವ ಕಾಂಗ್ರೆಸ್ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಸಿದ್ದಿಕ್ ಕೊಕ್ಕೋ, ನ.ಪಂ. ಸದಸ್ಯ ಶರೀಫ್ ಕಂಠಿ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿಜೇಶ್ ಹಿರಿಯಡ್ಕ, ಮಂಗಳೂರು ಉತ್ತರ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆಳ್ವ, ಯುವ ಕಾಂಗ್ರೆಸ್ ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಫವಾಜ್ ಕನಕಮಜಲು, ತಾ.ಪಂ. ಮಾಜಿ ಸದಸ್ಯ ಅನಿಲ್ ರೈ ಬೆಳ್ಳಾರೆ, ಯುವ ಇಂಟೆಕ್ ಅಧ್ಯಕ್ಷ ಅನಿಲ್ ಬಳ್ಳಡ್ಕ, ಕಾಂಗ್ರೆಸ್ ವಕ್ತಾರ ನಂದರಾಜ್ ಸಂಕೇಶ್, ಭವಾನಿಶಂಕರ ಕಲ್ಮಡ್ಕ, ಸಚಿನ್ ರಾಜ್ ಶೆಟ್ಟಿ, ಎನ್ ಎಸ್ ಯು ಐ ಜಿಲ್ಲಾ ಉಪಾಧ್ಯಕ್ಷರಾದ ಸವಾದ್ ಗೂನಡ್ಕ, ಎನ್ ಎಸ್ ಯು ಐ ಸುಳ್ಯ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ, ಆಶೀಕ್ ಆರಂತೋಡು, ಶಹಾಲ್, ನಿತಿನ್ ಅಲೆಟ್ಟಿ, ಪ್ರಮೋದ್ ಬೊಳ್ಳಾಜೆ, ಯಶವಂತ್, ಭರತ್, ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.