Breaking News

ಪಯಸ್ವಿನಿ ಸೀನಿಯರ್ ಲೀಜನ್ ಪ್ರಥಮ ಸಭೆಯಲ್ಲಿ ಲಾಕ್‌ಡೌನ್‌ನಿಂದ ಆದ ಪರಿಣಾಮಗಳ ಕುರಿತು ಎಂ.ಬಿ.ಸದಾಶಿವರಿಂದ ಉಪನ್ಯಾಸ

Advt_Headding_Middle
Advt_Headding_Middle

ಸುಳ್ಯ ಪಯಸ್ವಿನಿ ಸೀನಿಯರ್ ಲೀಜನ್‌ನ ಪ್ರಥಮ ಸಭೆಯು ಪಯಸ್ವಿನಿ ಸೀನಿಯರ್ ಲೀಜನ್‌ನ ಅಧ್ಯಕ್ಷರಾದ ಜೇಸಿ ದಿನೇಶ್ ಮಡಪ್ಪಾಡಿಯವರ ಅಧ್ಯಕ್ಷತೆಯಲ್ಲಿ ಸೆ.29ರಂದು ಕಾನತ್ತೀಲ ದೇವಮ್ಮ ಕಾಂಪ್ಲಕ್ಸ್‌ನಲ್ಲಿ ನಡೆಯಿತು.


ಈ ಸಭೆಯಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರಾದ ಜೇಸಿಐ ಸೆನೆಟರ್ ಎಂ.ಬಿ.ಸದಾಶಿವರವರಿಂದ ” ಲಾಕ್‌ಡೌನ್‌ನಿಂದ ಜನರಿಗೆ ಆದ ಪರಿಣಾಮಗಳು ಹಾಗೂ ನಂತರ ಯಾವ ರೀತಿಯ ಬದಲಾವಣೆಗಳು” ವಾಸ್ತವದಲ್ಲಿ ಜನಸಾಮಾನ್ಯರಿಗಾದ ಕಷ್ಟನಷ್ಟಗಳು, ಸಾಧಕ-ಭಾಧಕಗಳ ಮೇಲೆ ನಿರರ್ಗಳ ಉಪನ್ಯಾಸ ಕಾರ್ಯಕ್ರಮವು ನಡೆಯಿತು.


ವೇದಿಕೆಯಲ್ಲಿ ನಿಕಟಪೂರ್ವ ಸೀನಿಯರ್ ಲೀಜನ್‌ನ ಅಧ್ಯಕ್ಷರಾದ ಜೇಸಿ ಅಬ್ದುಲ್ಲ ಎ., ಜೇಸಿಐ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಜೇಸಿ ಜಯಪ್ರಕಾಶ್ ಕೆ. ಮತ್ತು ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷರಾದ ಜೇಸಿ ದೇವರಾಜ್ ಕುದ್ಪಾಜೆ ಉಪಸ್ಥಿತರಿದ್ದರು.
ಸಭೆಯಲ್ಲಿ ನಿವೃತ್ತ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಜೇಸಿ ಕೆ.ಆರ್. ಗಂಗಾಧರ, ಎಸ್.ಆರ್.ಸೂರಯ್ಯ, ಪಿ.ಎಸ್.ಗಂಗಾಧರ, ನ್ಯಾಂiiವಾದಿ ದಿನೇಶ್ ಅಂಬೆಕಲ್ಲು, ಮೋಹನ್ ಎ.ಕೆ., ಲೋಕೇಶ್ ಪೆರ್ಲಂಪಾಡಿ, ದೇವಿಪ್ರಸಾದ್ ಕುದ್ಪಾಜೆ, ಜೇಸಿ ರಾಷ್ಟ್ರೀಯ ನಿರ್ದೇಶಕ ಜೇಸಿ ಅಶೋಕ್ ಚೂಂತಾರ್, ಭೀಮರಾವ್ ವಾಷ್ಠರ್, ಕೆ.ವಿ.ಜಿ. ಆರ್ಯುವೇದ ಕಾಲೇಜ್ ಉಪನ್ಯಾಸಕಿ ಡಾ.ವಿಜಯಲಕ್ಷ್ಮೀ ಜಯಪ್ರಕಾಶ್, ಶ್ರೀಮತಿ ಚಿತ್ರಲೇಖ ಮಡಪ್ಪಾಡಿ, ಶ್ರೀಮತಿ ಪೂರ್ಣಿಮಾ ಅಂಬೆಕಲ್ಲು, ಶ್ರೀಮತಿ ಚೇತನಾ ಮೋಹನ್ ಎ.ಕೆ. ಮುಂತಾದವರು ಉಪಸ್ಥಿತರಿದ್ದರು.


ಶ್ರೀಮತಿ ಪೂರ್ಣಿಮಾ ಅಂಬೆಕಲ್ಲುರವರು ಆರಂಭದಲ್ಲಿ ಕವಿ ಸುಬ್ರಾಯ ಚೊಕ್ಕಾಡಿಯವರ ಭಾವಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತುಂಬಿದರು.
ಜೇಸಿ ಟ್ರಸ್ಟ್ ಅಧ್ಯಕ್ಷರಾದ ಜೇಸಿ ಜಯಪ್ರಕಾಶ್ ಕೆ. ಯವರು ವಂದಿಸಿದರು. ಸಭೆಯ ಆತಿಥ್ಯವನ್ನು ಜೇಸಿ ಮೋಹನ್ ಎ.ಕೆ. ದಂಪತಿಯವರು ವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.