ಬೆಳ್ಳಾರೆಯಲ್ಲಿ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ

Advt_Headding_Middle
Advt_Headding_Middle

 

 

ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ ,ಎಸ್ ಕೆ ಎಸ್ ಎಸ್ ಎಫ್ ವಿಖಾಯ ದ.ಕ ಜಿಲ್ಲೆ ,ಎಸ್ ಕೆ ಎಸ್ ಎಸ್ ಎಫ್ ವಿಖಾಯ ಸುಳ್ಯ ವಲಯ , ಎಸ್ ಕೆ ಎಸ್ ಎಸ್ ಎಫ್ ವಿಖಾಯ ಬೆಳ್ಳಾರೆ ಕ್ಲಸ್ಟರ್ ಇದರ ಆಶ್ರಯ ದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ಸೆ.29 ರಂದು ಬೆಳ್ಳಾರೆ ರಾಜೀವ್ ಗಾಂಧೀ ಸಭಾ ಭವನ ಬೆಳ್ಳಾರೆ ಯಲ್ಲಿ ನಡೆಯಿತು.

ಟ್ರಸ್ಟ್ ಸ್ಥಾಪಕಧ್ಯಕ್ಷ ಯು ಹೆಚ್ ಅಬೂಬಕ್ಕರ್ ಅಧ್ಯಕ್ಷ ತೆ ವಹಿಸಿದ್ದರು. ಎಸ್ ಕೆ ಎಸ್ ಎಸ್ ಎಫ್ ದ.ಕ ಕನ್ನಡ ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ಉದ್ಘಾಟಿಸಿ ಮಾತನಾಡಿದರು.ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಬೆಳ್ಳಾರೆ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು , ಬೆಳ್ಳಾರೆ ವಾಣಿಜ್ಯ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ , ಬೆಳ್ಳಾರೆ ಗ್ರಾ.ಪಂ ಮಾಜಿ ಸದಸ್ಯ ಆರೀಫ್ ಬೆಳ್ಳಾರೆ , ಎಸ್ ಕೆ ಎಸ್ ಎಸ್ ಎಫ್ ರಕ್ತದಾನಿ ಉಸ್ತುವಾರಿ ತಾಜುದ್ದೀನ್ ಟರ್ಲಿ , ಗ್ರಾ.ಪಂ ಬೆಳ್ಳಾರೆ ಮಾಜಿ ಸದಸ್ಯ ಮುಸ್ತಫಾ , ಡಾ.ತಿಲಕ್ ಭಟ್ ಕಾರ್ಯಕ್ರಮ ದಲ್ಲಿ ಕಾರ್ಯಕ್ರಮ ದ ಕುರಿತು ಮಾತನಾಡಿದರು.ಟ್ರಸ್ಟ್ ಉಪಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಯಂಬಾಡಿ ,ಇಂಡಿಯನ್ ರೆಡ್ ಕ್ರಾಸ್ ಮಂಗಳೂರು ಇದರ ಪ್ರವೀಣ್ ಕುಮಾರ್ ರೈ , ಎಸ್ ಕೆ ಎಸ್ ಎಸ್ ಎಫ್ ದ.ಕ ಕನ್ವೀನರ್ ಆಸಿಫ್ ಕಬಕ ,ಎಸ್ ಕೆ ಎಸ್ ಎಸ್ ಎಫ್ ಐವರ್ನಾಡು ಯೂನಿಟ್ ಅಧ್ಯಕ್ಷ ಖಾಲಿದ್ ಅಕ್ರಂ , ಎಸ್ಕೆ ಎಸ್ ಎಸ್ ಎಫ್ ಪಾಜಪಳ್ಳ ಯುನಿಟ್ ಅಧ್ಯಕ್ಷ ಇಸ್ಮಾಯಿಲ್ ನೀರ್ಪಂಜ , ಎಸ್ಕೆ ಎಸ್ ಎಸ್ ಎಫ್ ಚೆನ್ನಾರ್ ಯುನಿಟ್ ಅಧ್ಯಕ್ಷ ಜಮಾಲ್ ಚೆನ್ನಾರ್ , ಸುಳ್ಯ ವಲಯ ಎಸ್ಕೆ ಎಸ್ ಎಸ್ ಎಫ್ ಚೇರ್ಮನ್ ಶರೀಫ್ ಅಜ್ಜಾವರ , ಸುಳ್ಯ ವಿಖಾಯ ಕನ್ವೀನರ್ ಖಲಂದರ್ ಎಲಿಮಲೆ , ಝಕರಿಯಾ ಜುಮಾ ಮಸೀದಿ ಬೆಳ್ಳಾರೆ ಕಾರ್ಯ ದರ್ಶಿ ಬಶೀರ್ ಕಲ್ಲಪಣೆ , ಟ್ರಸ್ಟ್ ಉಪಾಧ್ಯಕ್ಷ ನಾಸಿರ್ ಶೂಬಿಝ್ , ಎಸ್ಕೆ ಎಸ್ ಎಸ್ ಎಫ್ ಸುಳ್ಯ ವಲಯ ಅಧ್ಯಕ್ಷ ಜಮಾಲುದ್ದೀನ್ ಕೆ ಎಸ್ , ಎಸ್ಕೆ ಎಸ್ ಎಸ್ ಎಫ್ ಬೆಳ್ಳಾರೆ ಕ್ಲಸ್ಟರ್ ಅಧ್ಯಕ್ಷ ಸಿದ್ದೀಖ್ ಮಾಲೆಂಗೇರಿ , ಝಕರಿಯಾ ಜುಮಾ ಮಸೀದಿ ಬೆಳ್ಳಾರೆ ಸದಸ್ಯ ಅಝರುದ್ದೀನ್ ಬೆಳ್ಳಾರೆ , ಕಮಾಲ್ ಪೆರುವಾಜೆ , ಆಶಿಕ್ ಬೆಳ್ಳಾರೆ ಮತ್ತಿತರು ಉಪಸ್ಥಿತರಿದ್ದರು .

ನೂರರಷ್ಟು ಮಂದಿಯಿಂದ ರಕ್ತದಾನ

ರಕ್ತದಾನ ಶಿಬಿರದಲ್ಲಿ ಸುಮಾರು ನೂರರಷ್ಟು ಜನ ರಕ್ತದಾನವನ್ನು ಮಾಡಿದರು ಹಾಗೂ ರಕ್ತದಾನಿ ಗಳಿಗೆ ಸರ್ಟಿಫಿಕೇಟ್ ನೀಡಲಾಯಿತು.

ಕಾರ್ಯ ಮದಲ್ಲಿ ಶಂಸುಲ್ ಉಲಮಾ ಯೂತ್ ವಿಂಗ್ ಅಧ್ಯಕ್ಷ ಶಾಫಿ ಸ್ಕೈ ಬೆಳ್ಳಾರೆ ಸ್ವಾಗತಿಸಿ ,ಸುಳ್ಯ ಮದ್ರಸ ಮ್ಯಾನೇಜ್ಮೆಂಟ್ ಕಾರ್ಯ ದರ್ಶಿ ಬಶೀರ್ ಯು ಪಿ ಬೆಳ್ಳಾರೆ ವಂದಿಸಿದರು.ಸಿದ್ದೀಖ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.