ಬೆಳ್ಳಾರೆ ಪೊಲೀಸ್ ಠಾಣಾ ನಿವೃತ್ತ ಎ.ಎಸ್.ಐ ಮಧುರವರಿಗೆ ಸನ್ಮಾನ ಬೀಳ್ಕೊಡುಗೆ

Advt_Headding_Middle
Advt_Headding_Middle

 

ಕೊರೊನಾ ಸಮಯದಲ್ಲಿ ಸಹಕರಿಸಿದವರಿಗೆ ಅಭಿನಂದನೆ

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಆಗಿ ಸೇವೆ ಸಲ್ಲಿಸಿ ಸೆ.30 ರಂದು ನಿವೃತ್ತರಾದ ಮಧು ಟಿ.ಯವರಿಗೆ ಸನ್ಮಾನ ಮತ್ತು ಬೀಳ್ಕೊಡುಗೆ ಹಾಗೂ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಪೊಲೀಸರಿಗೆ ಸಹಕಾರ ನೀಡಿದವರಿಗೆ ಬೆಳ್ಳಾರೆ ಪೊಲೀಸ್ ಠಾಣಾ ವತಿಯಿಂದ ಸನ್ಮಾನ ಕಾರ್ಯಕ್ರಮವು ಸೆ.30 ರಂದು ದೇವಿ ಹೈಟ್ಸ್ ನ ಅನುಗ್ರಹ ಸಭಾಭವನದಲ್ಲಿ ನಡೆಯಿತು.
ಎ.ಎಸ್.ಐ ಮಧು ಟಿ ಮತ್ತು ಶ್ರೀಮತಿ ಬೇಬಿರೇಖಾ ದಂಪತಿಗಳನ್ನು ಶಾಲು ಹೊದಿಸಿ,ಫಲ ಪುಷ್ಪ ಸ್ಮರಣಿಕೆ,ಉಂಗುರ ತೊಡಿಸಿ ಸನ್ಮಾನಿಸಲಾಯಿತು.
ಸಾರ್ವಜನಿಕ ಗಣೇಶೋತ್ಸವ ಸಮಿತಿ ಕುಕ್ಕುಜಡ್ಕ ವತಿಯಿಂದ ಗಣೇಶ ಪಿಲಿಕಜೆ ಮತ್ತು ಯತಿರಾಜ ಪೈಲೂರುರವರು ಮಧು ರವರನ್ನು ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಬೆಳ್ಳಾರೆ ಠಾಣೆಯಲ್ಕಿ ಎ.ಎಸ್.ಐ.ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋಹನ್ ಉಳುವಾರು ರವರಿಗೆ ಸುಬ್ರಹ್ಮಣ್ಯ ಠಾಣೆಗೆ ವರ್ಗಾವಣೆಯಾಗಿದ್ದು ಇವರನ್ನು ಅಭಿನಂದಿಸಲಾಯಿತು.
ಕೊರೊನಾ ಲಾಕ್ ಡೌನ್ ಸಮಯದಲ್ಲಿ
ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಊಟ,ಚಾ ತಿಂಡಿ ನೀಡಿ ಸಹಕಾರ ನೀಡಿದ ಜಯರಾಮ ಉಮಿಕ್ಕಳ,ಮೋಹನ ಗೌಡ ಕೆಮ್ಮಾರ,ಪವನ್ ಶೆಣೈ ಬೆಳ್ಳಾರೆ,ಸಚಿನ್ ಸವಣೂರು,ಕೃಷ್ಣಮೂರ್ತಿ ಮಾಡಾವು,ಉಮೇಶ ರೈ ಮರುವಂಜ,ರಾಜಾರಾಮ ಸವಣೂರು ರವರನ್ನು ಸನ್ಮಾನಿಸಲಾಯಿತು.
ಸುಳ್ಯದ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಸುಳ್ಯ ಎಸ್.ಐ.ಹರೀಶ್,ಪ್ರೊಭೆಷನರಿ ಎಸ್.ಐ.ಸಂದೀಪ್,ಕ್ರೈಂ ಎಸ್.ಐ.ರತ್ನಕುಮಾರ್ ಉಪಸ್ಥಿತರಿದ್ದರು.
ಕಾನ್ಸ್ ಟೇಬಲ್ ಶ್ರೀಮತಿ ನಂದಿನಿ ಪ್ರಾರ್ಥಿಸಿ,ಬೆಳ್ಳಾರೆ ಠಾಣಾ ಎಸ್.ಐ.ಆಂಜನೇಯ ರೆಡ್ಡಿ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.
ಎ.ಎಸ್.ಐ.ಭಾಸ್ಕರ್ ಕಾರ್ಯಕ್ರಮ ನಿರೂಪಿಸಿ, ಶ್ರೀಶೈಲ ವಂದಿಸಿದರು.
ಸಿಬ್ಬಂದಿ ವರ್ಗದವರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.