20 ತಿಂಗಳಲ್ಲಿ ರೂ. 4 ಕೋಟಿ 99 ಲಕ್ಷ ಮಾರುಕಟ್ಟೆ ಶುಲ್ಕ ಸಂಗ್ರಹ

Advt_Headding_Middle
Advt_Headding_Middle

 

ಎಪಿಎಂಸಿಯಿಂದ ಅಭಿವೃದ್ಧಿ ಕಾರ್ಯ : ದೀಪಕ್ ಕುತ್ತಮೊಟ್ಟೆ

ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು 2019-20 ನೇ ಸಾಲಿನಲ್ಲಿ ಇತಿಹಾಸದಲ್ಲಿಯೇ ಅತೀ ಹೆಚ್ಚು ಮಾರುಕಟ್ಟೆ ಶುಲ್ಕ ರೂ.3.8೦ ಕೋಟಿ ಸಂಗ್ರಹಿಸಿದ್ದು ಸರಕಾರ ನಿಗಧಿಪಡಿಸಿದ ಗುರಿಗಿಂತ ಸುಮಾರು ರೂ.5೦.೦೦ಲಕ್ಷ ಹೆಚ್ಚು ಸಂಗ್ರಹಿಸಲಾಗಿರುತ್ತದೆ. 2019-20 ನೇ ಸಾಲಿನಲ್ಲಿ ರೂ.2.96 ಕೋಟಿ ಹಾಗೂ 2020-21 ನೇ ಸಾಲಿನ ಸೆಪ್ಟೆಂಬರ್ ತಿಂಗಳವರೆಗೆ ರೂ.2.03 ಕೋಟಿ ಮಾರುಕಟ್ಟೆ ಶುಲ್ಕ ವಸೂಲಾತಿ ಮಾಡಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಹೇಳಿದರು.
ಅ. 1 ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸಮಿತಿಯಲ್ಲಿ ಖಾಲಿ ಇದ್ದ ಕಾರ್ಯದರ್ಶಿ ಹುದ್ದೆಗೆ ಖಾಯಂ ಕಾರ್ಯದರ್ಶಿಯವರನ್ನು ನೇಮಕ ಮಾಡವಲ್ಲಿ ಹಾಗೂ ಕಛೇರಿಯ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡುವ ಕಾರ್ಯದಲ್ಲಿ ನಮ್ಮ ಅವಧಿಯಲ್ಲಿ ಸಮಿತಿಯು ಸಫಲವಾಗಿದೆ.
ಇನ್ನು ಅಭಿವೃದ್ಧಿ ಕಾರ್ಯಗಳಲ್ಲಿ 2018-19 ನೇ ಸಾಲಿನಲ್ಲಿ ಸುಮಾರು 1.17 ಕೋಟಿ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳಿಸಿದ್ದು ಇದರಲ್ಲಿ ಮಾರುಕಟ್ಟೆ ಪ್ರಾಂಗಣದ ಅಭಿವೃದ್ಧಿ ಹಾಗೂ ಸುಳ್ಯ ತಾಲ್ಲೂಕಿನ ವಿವಿಧ ಕಡೆಗಳಲ್ಲಿ 7 ಸಂಖ್ಯೆ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿರುತ್ತದೆ. 2019-2೦ನೇ ಸಾಲಿನಲ್ಲಿ ರೂ.97.೦೦ಲಕ್ಷಗಳಲ್ಲಿ ಪ್ರಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಹಾಗೂ 1೦ ಸಂಖ್ಯೆ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕಾಮಗಾರಿ ಕೈಗೆತ್ತಿಕೊಂಡಿದ್ದು, ಇದರಲ್ಲಿ11.5೦ಲಕ್ಷದ 3 ರಸ್ತೆ ಕಾಮಗಾರಿ ಒಳಗೊಂಡು 4 ಕಾಮಗಾರಿಗಳಿಗೆ ಕೆಲಸದ ಆದೇಶ ನೀಡಲಾಗಿದ್ದು, ರೂ.85.5೦ಲಕ್ಷದ ಕಾಮಗಾರಿಗಳಿಗೆ ಮುಂದಿನ ವಾರದಲ್ಲಿ ಟೆಂಡರ್ ಕರೆಯಲು ಉದ್ದೇಶಿಸಲಾಗಿದೆ.
2020-21 ನೇ ಸಾಲಿನಲ್ಲಿ ಒಟ್ಟು 1.82 ಕೋಟಿ ಅಂದಾಜು ವೆಚ್ಚದಲ್ಲಿ 13 ಸಂಖ್ಯೆ ಕಾಮಗಾರಿಗಳಲ್ಲಿ ರೂ.85 .೦೦ ಲಕ್ಷ ಅಂದಾಜು ಮೊತ್ತದ 9 ಗ್ರಾಮೀಣ ರಸ್ತೆ ಅಭಿವೃದ್ಧಿ ಮತ್ತು 2 ಪ್ರಾಂಗಣದಲ್ಲಿನ ದುರಸ್ತಿ ಕಾಮಗಾರಿಗಳಿಗೆ ಆಡಳಿತಾತ್ಮಕ ಹಾಗೂ ತಾಂತ್ರಿಕ ಮಂಜೂರಾತಿ ದೊರೆತಿದ್ದು ಮುಂದಿನ ವಾರದಲ್ಲಿ ಟೆಂಡರ್ ಕರೆಯಲು ಉದ್ದೇಶಿಸಲಾಗಿದೆ.
2018-19 ನೇ ಸಾಲಿನಲ್ಲಿ ಆರ್.ಐ.ಡಿ.ಎಫ್.(ನಬಾರ್ಡ್) ಯೋಜನೆಯಡಿ ಮಂಜೂರಾದ ರೂ.5೦.೦೦ಲಕ್ಷ ಅಂದಾಜು ಮೊತ್ತದ 150ಎಂ.ಟಿ. ಸಾಮರ್ಥ್ಯದ ಗೋದಾಮು ನಿರ್ಮಾಣ ಕಾಮಗಾರಿಯನ್ನು 2020 ನೇ ಸೆಪ್ಟೆಂಬರ್ ಮಾಹೆಯಲ್ಲಿ ಪೂರ್ಣಗೊಳಿಸಲಾಗಿದ್ದು, ಇನ್ನೇನು ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದೆ.
ಹೊಸ ಆಡಳಿತ ಮಂಡಳಿ ಬಂದ ನಂತರ ಹೀಗೆ ಸುಮಾರು 1.೦೦ ಕೋಟಿ ರೂ. ವೆಚ್ಚದಲ್ಲಿ ಹಲವು ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಂಡು ಗ್ರಾಮೀಣ ಭಾಗದ ರೈತರು ತಮ್ಮ ಹುಟ್ಟುವಳಿಗಳನ್ನು ತರಲು ಅನುಕೂಲ ಮಾಡಿ ಅವರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ.
ನಮ್ಮ ಅಧಿಕಾರವಧಿಯಲ್ಲಿ ನಮ್ಮದೇ ಕ್ಷೇತ್ರದ ಮನೋಹರ.ಪಿ.ಆರ್., ಪೂಜಾರಿ ಮನೆ, ಅರಂತೋಡು ಇವರು ಕೃಷಿ ಹುಟ್ಟುವಳಿ ಮಾರಾಟ ಮಾಡಿ ಹಿಂತಿರುಗುವಾಗ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ ಶಾಸಕರ ನೆರವಿನೊಂದಿಗೆ ರೂ.1.೦೦ಲಕ್ಷ ರೈತ ಸಂಜೀವಿನಿ ಅಪಘಾತ ವಿಮಾ ಪರಿಹಾರ ಮೊತ್ತವನ್ನು ಸದರಿಯವರ ಪತ್ನಿ ಶ್ರೀಮತಿ ಪ್ರತಿಮ.ಪಿ ಇವರಿಗೆ ದೊರಕಿಸಿ ಕೊಡಲಾಗಿದೆ.
ನಮ್ಮ ಅಧಿಕಾರವಧಿಯಲ್ಲಿ ಕೊಡಗು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ರೂ.2.೦೦ ಲಕ್ಷಗಳನ್ನು ಹಾಗೂ ಕೋವಿಡ್ ನಿಯಂತ್ರಣಕ್ಕಾಗಿ ರೂ.25.೦೦ಲಕ್ಷಗಳು ಹೀಗೆ ಒಟ್ಟು 27.೦೦ಲಕ್ಷಗಳ ಸಹಾಯಧನವನ್ನು ಎ.ಪಿ.ಎಂ.ಸಿ. ವತಿಯಿಂದ ?ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ? ನೀಡಲಾಗಿದ್ದು ಸಂಕಷ್ಠದ ಸಂದರ್ಭದಲ್ಲಿ ಸರಕಾರದೊಂದಿಗೆ ಕೈಜೋಡಿಸಿದ ತೃಪ್ತಿ ನಮಗಿದೆ.
ನಮ್ಮ ಅವಧಿಯಲ್ಲಿ 2019 ನೇ ಫೆಬ್ರವರಿಯಿಂದ ಇದುವರೆಗೆ 69 ಜನ ರೈತರಿಗೆ ಅಡಮಾನ ಸಾಲ ಯೋಜನೆಯಡಿ ರೂ.88 .೦೦ಲಕ್ಷಗಳನ್ನು ಬಡ್ಡಿ ರಹಿತವಾಗಿ ನೀಡಲಾಗಿರುತ್ತದೆ.

ಕೋವಿಡ್-19 ನಿಯಂತ್ರಣಕ್ಕಾಗಿ ಲಾಕ್‌ಡೌನ್ ಘೋಷಣೆಯಾದ ಸಂದರ್ಭದಲ್ಲಿ ಪೇಟೆಯ ಎಲ್ಲಾ ಅಡಿಕೆ ವ್ಯಾಪಾರಸ್ಥರಿಗೆ ಪ್ರಾಂಗಣದಲ್ಲಿ ವ್ಯವಹರಿಸಲು ತಾತ್ಕಾಲಿಕವಾಗಿ ಗೋದಾಮುಗಳ ವ್ಯವಸ್ಥೆ ಕಲ್ಪಿಸಿಕೊಡಲಾಗಿದ್ದು, ರೈತರಿಗೆ ತಮ್ಮ ಹುಟ್ಟುವಳಿಗಳನ್ನು ಅಂತರ ಕಾಯ್ದುಕೊಂಡು ಮಾರಾಟ ಮಾಡಲು ಸೂಕ್ತ ವ್ಯವಸ್ಥೆ ಸಹ ಕಲ್ಪಿಸಿಕೊಡಲಾಗಿರುತ್ತದೆ. ಇನ್ನು ವರ್ತಕರಿಗೆ ವರ್ತಕ ಸ್ನೇಹಿ ಎ.ಪಿ.ಎಂ.ಸಿ ನಿರ್ಮಾಣ ಮಾಡಿ ಹೆಚ್ಚು ಮಾರುಕಟ್ಟೆ ಶುಲ್ಕ ಪಾವತಿಸಲು ಪ್ರೇರೆಪಿಸಲಾಗುತ್ತಿದೆ. ಪ್ರಾಂಗಣದಲ್ಲಿನ ಗೋದಾಮುಗಳಲ್ಲಿ ವ್ಯಾಪಾರ ಮಾಡುವಂತೆ ವರ್ತಕರ ಮನವೊಲಿಸಿದ್ದು, ಹಂಚಿಕೆ ಪ್ರಸ್ತಾವನೆಗೆ ಕೇಂದ್ರ ಕಛೇರಿಯಿಂದ ಮಂಜೂರಾತಿ ಪಡೆಯುವಲ್ಲಿ ನಿರಂತರ ಸಂಪರ್ಕದಲ್ಲಿದ್ದು ಸಕಾಲದಲ್ಲಿ ಮಂಜೂರಾತಿ ಪಡೆಯಲಾಗಿರುತ್ತದೆ. ಪ್ರಸ್ತುತ ಖಾಲಿ ಇರುವ ಗೋದಾಮುಗಳು ಮತ್ತು ವಾಣಿಜ್ಯ ಸಂಕೀರ್ಣದ ಮಳಿಗೆಗಳನ್ನು ಹಂಚಿಕೆಗೆ ಕ್ರಮ ಕೈಗೊಂಡಿದ್ದು ಲೀವ್ ಲೈಸನ್ಸ್ ಶುಲ್ಕ(ಬಾಡಿಗೆ)ದಿಂದ ಸಮಿತಿಯ ಆದಾಯವನ್ನು ಹೆಚ್ಚಿಸುವಲ್ಲಿ ಸಫಲರಾಗಿತ್ತೇವೆ.
ನಮ್ಮ ಅವಧಿಯಲ್ಲಿ ಸಮಿತಿಯ ಸಮುದಾಯ ಭವನವನ್ನು ಬಾಡಿಗೆ ರಹಿತವಾಗಿ ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಲು ಸಂಪೂರ್ಣ ಅವಕಾಶ ಕಲ್ಪಿಸಲಾಗಿದ್ದು, ಕೇಂದ್ರ ಸರ್ಕಾರದ ಆತ್ಮ ನಿರ್ಭರ ಸ್ವಾವಲಂಭಿ ಜೀವನ ನಡೆಸುವ ಬಗ್ಗೆ ಏರ್ಪಡಿಸಲಾದ 3 ವಾರದ ತರಭೇತಿ ಕಾರ್ಯಕ್ರಮ, ಆಯುಷ್ಮಾನ್ ಕಾರ್ಡ್ ನೋಂದವಣೆ ಮತ್ತು ವಿತರಣೆಯ 2 ದಿನದ ಕಾರ್ಯಕ್ರಮ, ಕೃಷಿ ಇಲಾಖೆ ಮತ್ತು ಕ್ಯಾಂಪ್ಕೋ ವತಿಯಿಂದ 1 ದಿನದ ಬೆಳೆ ಸಮೀಕ್ಷೆ ಮೊಬೈಲ್ ಆಫ್ ಅಭಿಯಾನ ಕಾರ್ಯಕ್ರಮ, ಪಶು ಸಂಗೋಪನೆ ಇಲಾಖೆ ವತಿಯಿಂದ ಕಾಲು ಬಾಯಿ ರೋಗದ ಮಾಹಿತಿ ಕಾರ್ಯಗಾರ, ತೋಟಗಾರಿಕೆ ಇಲಾಖೆಯ ವತಿಯಿಂದ ಜೇನು ಸಾಕಣೆ ತರಭೇತಿ ಕಾರ್ಯಗಾರ, ರೈತ ಬೆಳೆಗಾರರ ಸಭೆ ಮತ್ತು ವಿವಿಧ ಇಲಾಖೆಗಳಲ್ಲಿ ನೀಡಲಾಗುವ ಯೋಜನೆಗಳ ಬಗ್ಗೆ ಮಾಹಿತಿ ಶಿಬಿರಗಳನ್ನು ಜರುಗಿಸಲಾಗಿರುತ್ತದೆ.
ಸಮಿತಿಯಿಂದ ಸಿ.ಪಿ.ಸಿ.ಆರ್.ಐ. ವಿಟ್ಲಕ್ಕೆ ಅಧ್ಯಯನ ಪ್ರವಾಸ ಕೈಗೊಂಡು ಸರ್ವ ಸದಸ್ಯರು ಮಾಹಿತಿಯನ್ನು ಪಡೆದುಕೊಂಡಿರುತ್ತೇವೆ.
ಮಾರುಕಟ್ಟೆ ಪ್ರಾಂಗಣದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವಂತೆ ಸರ್ಕಾರದಿಂದ ಬಂದಿರುವ ಸುತ್ತೋಲೆಯಂತೆ ಮಾರುಕಟ್ಟೆ ಪ್ರಾಂಗಣದ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ನಿಷೇದಿಸಲು ಕ್ರಮ ಕೈಗೊಂಡಿದ್ದು ಪೇಟೆ ಕಾರ್ಯಕರ್ತರಿಗೆ ಈ ಬಗ್ಗೆ ಮನವರಿಕೆ ಮಾಡಲಾಗಿದೆ. ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಗೊಳಿಸಲಾಗಿದೆ. ಇನ್ನು ಸುಳ್ಯ ಮಾರುಕಟ್ಟೆ ಪ್ರಾಂಗಣದ ಒಳಗೆ ವಾರಕ್ಕೊಮ್ಮೆ ಸಂತೆ ನಡೆಯುತ್ತಿದ್ದು ಇದರ ಸಂಪೂರ್ಣ ನಿರ್ವಹಣಾ ವೆಚ್ಚವನ್ನು ಎ.ಪಿ.ಎಂ.ಸಿ.ಯೇ ಭರಿಸುತ್ತಿದ್ದು ಇದರಿಂದ ಸುಳ್ಯ ಪೇಟೆಯ ಎಲ್ಲಾ ಗ್ರಾಹಕರಿಗೆ ರೈತರಿಂದ ನೇರವಾಗಿ ತಾಜಾ ಉತ್ಪನ್ನಗಳನ್ನು ಪಡೆಯಲು ಅನುಕೂಲವಾಗುತ್ತಿದೆ.
ಪ್ರಸ್ತುತ ಕೇಂದ್ರ ಸರ್ಕಾರವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ರೈತರು ತಾವು ಬೆಳೆದ ಉತ್ಪನ್ನವನ್ನು ಎಲ್ಲಿ ಬೇಕಾದಾರು ಮಾರಾಟ ಮಾಡಬಹುದು ಮತ್ತು ಆನ್ ಲೈನ್ ಮಾರಾಟ ಪದ್ಧತಿ ಮುಖಾಂತರ ನೇರವಾಗಿ ಬಳಕೆದಾರರಿಗೆ ಮಾರಾಟ ಮಾಡಬಹುದಾಗಿರುತ್ತದೆ. ಅಲ್ಲದೇ ಕಾಂಟ್ರಾಕ್ಟ್ ಫಾರ್ಮಿಂಗ್ ಪದ್ಧತಿ ಮುಖಾಂತರ ಸಹ ಬೇಡಿಕೆದಾರರೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಹ ಮಾರಾಟ ಮಾಡಬಹುದಾಗಿರುತ್ತದೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವಂತಾಗಬೇಕು ಮತ್ತು ಗೋದಾಮುಗಳಲ್ಲಿ ಶೇಖರೀಸಿ ಬೆಳೆಗಳು ನಾಶವಾಗುವುದನ್ನು ತಪ್ಪಿಸುವ ಸದುದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲಾಗಿರುತ್ತದೆ. ಅಲ್ಲದೇ ಸದರಿ ತಿದ್ದುಪಡಿಯಿಂದ ವರ್ತಕರಿಗೆ ಬಹಳ ಅನುಕೂಲವಾಗಿದ್ದು ಖರೀದಿ ಮೌಲ್ಯದ ಪ್ರತೀ 1೦೦ ರೂಪಾಯಿಗೆ ಶೇ.1.5೦ ರಂತೆ ವಿಧಿಸುತ್ತಿದ್ದ ಮಾರುಕಟ್ಟೆ ಶುಲ್ಕವನ್ನು ಶೆ.೦.35 ಕ್ಕೆ ಇಳಿಸಲಾಗಿರುತ್ತದೆ. ಇದರಿಂದ ಸಮಿತಿಯ ಆದಾಯಕ್ಕೆ ತುಂಬಾ ಹೊಡೆತ ಬಿದ್ದಿರುತ್ತದೆ. ಸಮಿತಿಯ ಆದಾಯವನ್ನು ಇತರೇ ಮೂಲಗಳಿಂದ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಾಗಿರುತ್ತದೆ.
ನಮ್ಮ ಆಡಳಿತ ಮಂಡಳಿಯು ರೈತ ಪರ ಅಭಿವೃದ್ಧಿ ಕಾರ್ಯಗಳಿಗಾಗಿ ಹಲವು ಯೋಜನೆಗಳನ್ನು ರೂಪಿಸಿದ್ದು ತಾಲ್ಲೂಕಿನ ಎಲ್ಲಾ ಕೃಷಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿನಂತಿಸುತ್ತೇವೆ ಎಂದು ದೀಪಕ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಸಂತೋಷ್ ಜಾಕೆ, ನಿರ್ದೇಶಕರುಗಳಾದ ಅಡ್ಡಂತಡ್ಕ ದೇರಣ್ಣ ಗೌಡ, ಆದಂ ಹಾಜಿ ಕಮ್ಮಾಡಿ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.