ಕಾಯಿದೆ ತಿಳಿಯದೆ ವಿರೋಧ ಮಾಡುತ್ತಿದ್ದಾರೆ, ಕೃಷಿ ಮಸೂದೆಯಿಂದ ರೈತರಿಗೆ ಅನುಕೂಲ : ಬಂಗಾರಡ್ಕ ವಿಶ್ವೇಶ್ವರ ಭಟ್

Advt_Headding_Middle
Advt_Headding_Middle

ಕೇಂದ್ರ ಸರಕಾರ ರೂಪಿಸಿರುವ ಕೃಷಿ ಮಸೂದೆಗೆ ವಿಪಕ್ಷಗಳು ಅಧ್ಯಯನ ಮಾಡದೆ ವಿರೋಧ ವ್ಯಕ್ತಪಡಿಸುತ್ತಿವೆ. ವಾಸ್ತವವಾಗಿ ನರೇಂದ್ರ ಮೋದಿ ನೇತೃತ್ವದ ಸರಕಾರ ಈಗ ರೂಪಿಸಿರುವ ಮಸೂದೆ ರೈತರ ಬೆಳೆಗೆ ಹೆಚ್ಚು ಬೆಲೆ ಸಿಗುವುದಕ್ಕೆ ಕಾರಣವಾಗುತ್ತದೆ ಎಂದು ಕೃಷಿ ತಜ್ಞ ಪುತ್ತೂರಿನ ಬಂಗಾರಡ್ಕ ವಿಶ್ವೇಶ್ವರ ಭಟ್ ಪ್ರತಿಪಾದಿಸಿದ್ದಾರೆ.
ಅವರು ಇಂದು ಸುಳ್ಯದ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ಸಹಕಾರ ಭಾರತಿ ವತಿಯಿಂದ ಸುಳ್ಯ ಸಿ.ಎ.ಬ್ಯಾಂಕ್ ಸಹಯೋಗದಲ್ಲಿ ಏರ್ಪಡಿಸಲಾದ ಕೃಷಿ ಮಸೂದೆಗಳ ಅರಿವು ಮತ್ತು ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವಿಚಾರ ಮಂಡಿಸಿ ಮಾತನಾಡಿದರು.
ರೈತರು ತಮ್ಮ ಬೆಳೆಯನ್ನು ಯಾವ ರಾಜ್ಯದಲ್ಲಿ ಬೇಕಾದರೂ ಮಾರಾಟ ಮಾಡುವುದಕ್ಕೆ ಅನುಕೂಲ ಕಲ್ಪಸುವುದಕ್ಕಾಗಿ ಅವಶ್ಯಕ ಸಾಮಾಗ್ರಿ ಎಂಬ ನಿಯಮದಿಂದ ಕೆಲವು ಆಹಾರ ಉತ್ಪನ್ನಗಳನ್ನು ತೆಗೆಯಲು ಕಾಯ್ದೆಯಲ್ಲಿ ನಿರ್ಧರಿಸಲಾಗಿದೆ. ರೈತರು ತಮ್ಮ ಕೃಷಿಭೂಮಿಯ ಗೇಟಿನ ಹೊರಗಡೆ ಎಲ್ಲಿ ಬೆಳೆಗಳನ್ನು ಮಾರಾಟ ಮಾಡುವುದಿದ್ದರೂ ಅದಕ್ಕೆ ಅನುಮತಿ ನೀಡಲಾಗಿದೆ. ಕೆಲವು ರೈತರು ಸೇರಿಕೊಂಡು ಆನ್‌ಲೈನ್ ಗ್ರೂಫ್ ರಚಿಸಿಕೊಂಡು ಮಾರುಕಟ್ಟೆ ಸೃಷ್ಟಿಸಿಕೊಂಡರೆ ಅದಕ್ಕೆ ತೆರಿಗೆ ವಿಧಿಸುವ ಅಥವಾ ಸೆಸ್ ವಿಧಿಸುವ ಪ್ರಮೇಯ ಇಲ್ಲದಂತೆ ಮಾಡಿದ್ದಾರೆ.

ರೈತರು ಅಥವಾ ಸಹಕಾರಿ ಸಂಘಗಳು ಯಾವುದೇ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದಾಗಿದೆ. ಒಪ್ಪಂದ ಮಾಡಿಕೊಂಡ ಕಂಪೆನಿಗಳು ರೈತರ ಭೂಮಿಗೆ ಹಕ್ಕುದಾರರಾಗುವುದಿಲ್ಲ. ಈ ರೀತಿ ಹಲವಾರು ಉತ್ತಮ ಅವಕಾಶಗಳನ್ನು ಮಸೂದೆಯಲ್ಲಿ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

 

ಸಹಕಾರ ಭಾರತಿ ಇಲ್ಲಾಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರತಿ ಗ್ರಾಮದಲ್ಲಿ ಈ ರೀತಿಯ ಕಾರ್ಯಾಗಾರಗಳನ್ನು ಸಂಘಟಿಸಬೇಕು. ಕೇಂದ್ರ ಸರಕಾರ ತಂದಿರುವ ಕೃಷಿ ಮಸೂದೆಯ ಪ್ರಯೋಜವನ್ನು ಗ್ರಾಮೀಣ ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಅವರು ಹೇಳಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ಸಹಕಾರ ಭಾರತಿ ತಾಲೂಕು ಅಧ್ಯಕ್ಷ ಪ್ರವೀಣ ಎಸ್. ರಾವ್ ಉಪಸ್ಥಿತರಿದ್ದರು. ಸುದರ್ಶನ್ ಪಾತಿಕಲ್ಲು ಸ್ವಾಗತಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.