ಯೇನೆಕಲ್ಲು: ವಿಶೇಷ ಚೇತನ‌ ಮಕ್ಕಳ ಆರೋಗ್ಯ ಮತ್ತು ಶೈಕ್ಷಣಿಕ ಸಂಸ್ಥೆ ಉದ್ಘಾಟನೆ, ಸಾಧಕರಿಗೆ ಸನ್ಮಾನ

Advt_Headding_Middle
Advt_Headding_Middle

 

ಶಶಾಂಕ ಚಾರಿಟೇಬಲ್ ಟ್ರಸ್ಟ್ ಯೇನೆಕಲ್ಲು ಇದರ ಆಶ್ರಯದಲ್ಲಿ ವಿಶೇಷ ಚೇತನ‌ ಮಕ್ಕಳ ಆರೋಗ್ಯ ಮತ್ತು ಶೈಕ್ಷಣಿಕ ಸಂಸ್ಥೆ ಉದ್ಘಾಟನಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಮತ್ತು ವಿಶೇಷ ಚೇತನ ಮಕ್ಕಳಿಗೆ ಅಕ್ಕಿವಿತರಣಾ ಕಾರ್ಯಕ್ರಮ ಅ. 1 ರಂದು ಯೇನೆಕಲ್ಲಿನ ಗೌರವ್ ಗಾರ್ಡನ್ ನಲ್ಲಿ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಯೇನೆಕಲ್ಲಿನ ಪ್ರವೀಣ್ ಮತ್ತು ಬಳಗದವರಿಂದ ಸ್ಯಾಕ್ಸಫೋನ್ ಮತ್ತು ಕೊಳಲು ವಾದನ ನಡೆಯಿತು. ಬಳಿಕ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕೆ.ಎಸ್. ದೇವರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮ ಮತ್ತು ವಿಶೇಷ ಚೇತನ ಮಕ್ಕಳ ಆರೋಗ್ಯ ಮತ್ತು ಶೈಕ್ಷಣಿಕ ಸಂಸ್ಥೆಯ ಉದ್ಘಾಟನೆಯನ್ನು
ತಾ.ಪಂ.‌ ಸದಸ್ಯ ಅಶೋಕ್ ನೆಕ್ರಾಜೆ ನೆರವೇರಿಸಿ ಶುಭ ಹಾರೈಸಿದರು. ಸುಳ್ಯ ಕ್ಲಸ್ಟರ್
ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಮತಿ ವೀಣಾ ಎಂ.ಟಿ ಟ್ರಸ್ಟ್‌ನ ಡಿಜಿಟಲ್‌ ಸೌಂಡ್ ಬಾಕ್ಸ್ ನ್ನು ಉದ್ಘಾಟಿಸಿದರು. ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು,
ಸುಬ್ರಹ್ಮಣ್ಯ ಗ್ರಾ.ಪಂ. ಮಾಜಿ ಸದಸ್ಯ ಹರೀಶ್ ಇಂಜಾಡಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ನೀಡಲ್ಪಡುವ ಸಜ್ಜನ ಸಿರಿ ಪ್ರಶಸ್ತಿ ಪುರಸ್ಕೃತರಾದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ,
ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟೈಟಸ್ ವರ್ಗೀಸ್, ಶ್ರೀಮತಿ ರೇಖಾ ಶೇಟ್, ಶ್ರೀಮತಿ ಜಾನಕಿ ಮುತ್ತಪ್ಪ ಮಾಸ್ಟರ್ ಮಾದನಮನೆ, 2019ನೇ ಸಾಲಿನಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಪದ್ಮಾ ಡಿ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 601 ಅಂಕ ಪಡೆದ ವಿಶೇಷ ಚೇತನ ವಿದ್ಯಾರ್ಥಿ ಕಾರ್ತಿಕ್ ರನ್ನು ಸನ್ಮಾನಿಸಲಾಯಿತು. ಸುಳ್ಯ ಬಿ.ಆರ್.ಪಿ. ಶ್ರೀಮತಿ ಚಂದ್ರಾವತಿ, ಸೊಣಂಗೇರಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶ್ರೀಮತಿ ವಾಣಿ ಸಚಿನ್, ಶ್ರೀಮತಿ ಕೃತಿಕಾ ಸನ್ಮಾನ ಪತ್ರ ವಾಚಿಸಿದರು. 61 ಮಕ್ಕಳಿಗೆ ತಲಾ 25 ಕೆ.ಜಿ. ಅಕ್ಕಿಯಂತೆ ವಿತರಿಸಲಾಯಿತು.
ಶ್ರೀ ಶಶಾಂಕ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮುತ್ತಪ್ಪ ಮಾಸ್ತರ್ ಮಾದನಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪಂಜ ಕ್ಲಷ್ಟರ್ ಸಿ.ಆರ್.ಪಿ ಜಯಂತ್ ಸ್ವಾಗತಿಸಿ, ಶಿಕ್ಷಕ ಶಶಿಧರ ಮಾವಿನಕಟ್ಟೆ ವಂದಿಸಿದರು. ಬಳ್ಪ ಶಾಲಾ ಶಿಕ್ಷಕ ಆನಂದ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಭೋಜನದ ಬಳಿಕ ಶಶಿಧರ್ ಮಾವಿನಕಟ್ಟೆ ಮತ್ತು ತಂಡದಿಂದ ರಸ ಮಂಜರಿ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.