ಚೆಂಬು: ಕಡವೆ ಬೇಟೆ ಪ್ರಕರಣ

Advt_Headding_Middle
Advt_Headding_Middle

 

ಸಂಪಾಜೆ ವಲಯಾರಣ್ಯಾಧಿಕಾರಿ ಮಧುಸೂದನ್ ನೇತೃತ್ವದಲ್ಲಿ ದಾಳಿ – ಹಲವರ ವಶ- ವಿಚಾರಣೆ


ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಕಟ್ಟಪಣೆ ಎಂಬಲ್ಲಿ ಅರಣ್ಯ ಪ್ರದೇಶದಲ್ಲಿ ಕಡವೆಯನ್ನು ಕೊಂದು ಮಾಂಸ ಹಂಚಿದ ಪ್ರಕರಣಕ್ಕೆ ಸಂಬಂಧಿಸಿ, ಖಚಿತ ಮಾಹಿತಿ ಪಡೆದ ಸಂಪಾಜೆ ವಲಯಾರಣ್ಯಾಧಿಕಾರಿ ಮಧುಸೂದನ್ ನೇತೃತ್ವದ ಅರಣ್ಯ ಇಲಾಖಾ ತಂಡದವರು ದಾಳಿ ನಡೆಸಿ, ಹಲವರನ್ನು ಕರೆತಂದು ವಿಚಾರಣೆಗೊಳಪಡಿಸಿದ ಘಟನೆ ಅ.1ರಂದು ವರದಿಯಾಗಿದೆ.

ಸಂಪಾಜೆ ವಲಯ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಚೆಂಬು ಗ್ರಾಮದ ಕಟ್ಟಪಳ್ಳಿಯ ಬಾಲಕೃಷ್ಣ ಹಾಗೂ ಸತೀಶ ಎಂಬವರು ಅರಣ್ಯ ಪ್ರದೇಶದಲ್ಲಿ ಕಡವೆಯನ್ನು ಕೊಂದು ಮಾಂಸ ಮಾಡಿ ಸ್ಥಳೀಯ ಮನೆಗಳಿಗೆ ಹಂಚಿದ್ದರೆನ್ನಲಾಗಿದ್ದು, ಇವರಿಗೆ ಈ ಪ್ರದೇಶದ ಹಲವು ಮಂದಿ ಸಾಥ್ ನೀಡಿದ್ದು, ಖಚಿತ ಮಾಹಿತಿ ಪಡೆದ ಕೊಡಗು ಸಂಪಾಜೆ ವಲಯ ಅರಣ್ಯ ಇಲಾಖಾಧಿಕಾರಿ ಮಧುಸೂದನ್ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಪ್ರಮುಖ ಆರೋಪಿಗಳಾದ ಬಾಲಕೃಷ್ಣ ಕಟ್ಟಪಳ್ಳಿ, ಸತೀಶ್ ಕಟ್ಟಪಳ್ಳಿ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ‌.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.