ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ ಹಾಗೂ ಶ್ರೀ ಗುರು ರಾಘವೇಂದ್ರ ಮಠಕ್ಕೆ ಎಡನೀರು ಮಠದ ಜಯರಾಮ ಮಂಜತ್ತಾಯ ಭೇಟಿ

Advt_Headding_Middle
Advt_Headding_Middle
Advt_Headding_Middle

 

ಎಡನೀರು ಮಠದ ನೂತನ ಪೀಠಾಧಿಪತಿಗಳಾಗಿ ಇದೇ ಅ.28ರಂದು ಪೀಠಾರೋಹಣಗೈಯಲಿರುವ ಜಯರಾಮ ಮಂಜತ್ತಾಯ ಅವರು ಸುಳ್ಯ ಶ್ರೀ

ಚೆನ್ನಕೇಶವ ದೇವಾಲಯಕ್ಕೆ ಹಾಗೂ ಕಾಂತಮಂಗಲ ಶ್ರೀ ಗುರು ರಾಘವೇಂದ್ರ ಮಠಕ್ಕೆ ಅ.15ರಂದು ಭೇಟಿ ನೀಡಿದರು.


ಜಯರಾಮ ಮಂಜತ್ತಾಯ ಅವರೊಂದಿಗೆ ಕುಂಟಾರು ಕ್ಷೇತ್ರದ ರವೀಶ ತಂತ್ರಿಯವರು ಆಗಮಿಸಿದ್ದು, ಎಡನೀರು ಮಠದಲ್ಲಿ ನೂತನವಾಗಿ ಪೀಠಾಧಿಪತಿಗಳಾಗಿ ದೀಕ್ಷೆ ಕೈಗೊಳ್ಳಲಿರುವ ಕಾರಣದಿಂದ ಜಯರಾಮ ಮಂಜತ್ತಾಯರವರು ಈಗಾಗಲೇ ಸುಮಾರು ನೂರ ಹತ್ತಕ್ಕೂ ಅಧಿಕ ದೇವಾಲಯಗಳಿಗೆ ಭೇಟಿ ನೀಡಿದ್ದು, ಅ.23ರಿಂದ ಅ.28ರವರೆಗೆ ಎಡನೀರು ಶ್ರೀ ಮಠದಲ್ಲಿ ಪೀಠಾರೋಹಣ ಕಾರ್ಯ ಜರುಗಲಿದ್ದು, ಆ ವೇಳೆಗೆ ಸುಮಾರು 140 ದೇವಾಲಯಗಳ ಭೇಟಿ ಕಾರ್ಯ ಪೂರ್ಣಗೊಳ್ಳಲಿದೆ ಎಂದು ರವೀಶ ತಂತ್ರಿಗಳು ಹೇಳಿದರು.

ಚೆನ್ನಕೇಶವ ದೇವಸ್ಥಾನ ಭೇಟಿ ಸಂದರ್ಭದಲ್ಲಿ ದೇವಾಲಯದ ಅನುವಂಶಿಕ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಎನ್. ಎ. ರಾಮಚಂದ್ರ, ಕೃಪಾಶಂಕರ್ ತುದಿಯಡ್ಕ, ಸೇರಿದಂತೆ ಅರ್ಚಕ ವೃಂದದವರು ಉಪಸ್ಥಿತರಿದ್ದರು.

ಕಾಂತಮಂಗಲ ಶ್ರೀ ಗುರು ರಾಘವೇಂದ್ರ ಮಠ ಭೇಟಿ ಸಂದರ್ಭದಲ್ಲಿ ಆಡಳಿತ ಮಂಡಳಿಯ ಶ್ರೀ ಕೃಷ್ಣ ಸೋಮಯಾಜಿ, ಪ್ರಕಾಶ್ ಮೂಡಿತ್ತಾಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.