ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ರತ್ನಾಕರ ಗೌಡ ಬಳ್ಳಡ್ಕ ಅವರು ಆಯ್ಕೆಯಾಗಿದ್ದಾರೆ.
ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನಗಳಿಗೆ ವ್ಯವಸ್ಥಾಪನ ಸಮಿತಿಗೆ
ಒಂಭತ್ತು ಜನ ಸದಸ್ಯರುಗಳನ್ನು ಆಯ್ಕೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು.
ನ.23 ರಂದು ದೇವಸ್ಥಾನದ ಸಭಾಂಗಣದಲ್ಲಿ ಅಧ್ಯಕ್ಷರ ಆಯ್ಕೆಯು ನಡೆಯಿತು.
ಸಮಿತಿಯ ನೂತನ ಸದಸ್ಯರುಗಳಾಗಿ ಗಿರಿಧರ ದಾಸ್, ಶ್ರೀಮತಿ ಶಾರದಾ ಡಿ.ಶೆಟ್ಟಿ, ಶ್ರೀಮತಿ ಲೀಲಾವತಿ ಬಳ್ಳಡ್ಕ, ಯು.ವಿ.ಭಾಸ್ಕರ ರಾವ್, ಗಿರೀಶ್ ರೈ ಅರಮನೆಗುತ್ತು, ಕೆ.ಶಶಿಧರ ನಾಯರ್, ಪಿ.ರಮೇಶ್ ಪಾನತ್ತಿಲ, ಅರ್ಚಕ ವೆಂಕಟ್ರಮಣ ಭಟ್ ಇವರುಗಳು ಆಯ್ಕೆಯಾದರು.