ಸುಳ್ಯ ಶಾಸಕ ಎಸ್.ಅಂಗಾರರವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಕೊಡಿಯಾಲದ ನೀರಜಾಕ್ಷಿ ಕೆ.ಕೆ.ನಾಯ್ಕ್ ರವರು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.
ಸುಳ್ಯ ತಾಲೂಕಿನ ತೀರಾ ಹಿಂದುಳಿದ ಗ್ರಾಮವಾದ ಕೊಡಿಯಾಲ ಗ್ರಾಮದಲ್ಲಿ ವಾಸಿಸುತ್ತಿದ್ದು ತಮ್ಮ ಆತ್ಮನಿರ್ಭರ ಭಾರತ ಯೋಜನೆಯಿಂದ ಪ್ರೇರಿತಳಾಗಿದ್ದು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತಿದ್ದೇನೆ.
ಮೂಲ ಸೌಕರ್ಯದಿಂದ ವಂಚಿತರಾಗಿದ್ದ ತಾಲೂಕಲ್ಲಿ ಶಾಸಕ ಅಂಗಾರರವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದುತ್ತಿದೆ.ಆರು ಬಾರಿ ಶಾಸಕರಾಗಿರುವ ಅವರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ಬಹುತೇಕ ಮೂಲ ಸೌಕರ್ಯಗಳು ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಆಗಿದೆ.
ತಾಲೂಕು ಇನ್ನಷ್ಟು ಪ್ರಗತಿಯಾಗಬೇಕಿದೆ.
ಅಭಿವೃದ್ಧಿಯ ವೇಗಕ್ಕಾಗಿ ಕ್ಷೇತ್ರದ ಶಾಸಕರಾದ ಎಸ್.ಅಂಗಾರರವರನ್ನು ಮಂತ್ರಿಯಾಗಿಸಿದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಪೂರಕವಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.ನೀರಜಾಕ್ಷಿ ಕೆ.ಕೆ.