ಲಯನ್ಸ್ ಕ್ಲಬ್ ವತಿಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು “ನನ್ನ ದೇಶ ನನ್ನ ಕನಸು” ವಿಚಾರದಲ್ಲಿ ತಾಲೂಕಿನ ವಿವಿಧ ಪ್ರೌಢಶಾಲೆಯ ಒಟ್ಟು ೫೫ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರ್ಧೆಯಲ್ಲಿ ಸುಬ್ರಮಣ್ಯೇಶ್ವರ ಪ್ರೌಢಶಾಲಾ ೯ನೇ ತರಗತಿ ವಿದ್ಯಾರ್ಥಿ ಕು | ತೃಪ್ತಿ. ಎಂ.ಪಿ ಬಿನ್ ಮೋಹನ ಪಲ್ಲಿಗದ್ದೆ ಪ್ರಥಮ ಸ್ಥಾನ ಪಡೆದರು. ದ್ವಿತೀಯ ಸ್ಥಾನಿಯಾಗಿ ರೋಟರಿ ಆಂಗ್ಲಮಾಧ್ಯಮ ಶಾಲೆಯ ೧೦ ನೇ ತರಗತಿ ವಿದ್ಯಾರ್ಥಿ ಅಮರ್. ಕೆ.ಸಿ. ಹಾಗೂ ತೃತೀಯ ಸ್ಥಾನಿಯಾಗಿ ಎಣ್ಮೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಕು | ರೇಣುಕಾ. ಸಿ. ಇವರು ಆಯ್ಕೆಯಾಗಿರುತ್ತಾರೆ.
ಸಮಾಧಾನಕರ ಬಹುಮಾನವನ್ನು ಶ್ರುತಿ.ಕೆ. ೯ನೇ ತರಗತಿ ಸರಕಾರಿ ಪ್ರೌಢಶಾಲೆ ದುಗಲಡ್ಕ, ಖುಷಿ.ಪಿ.ಎಸ್. ೯ನೇ ತರಗತಿ ವಿದ್ಯಾಬೋಧಿನಿ ಪ್ರೌಢಶಾಲೆ ಬಾಳಿಲ, ಸ್ಪೂರ್ತಿ. ಎಂ.ಪಿ. ಸ.ಪ.ಪೂ.ಕಾಲೇಜು ಸುಳ್ಯ ಮತ್ತು ತೃಪ್ತಿ. ಕೆ. ಟಿ. ೧೦ ನೇ ತರಗತಿ ಸರಕಾರಿ ಪ್ರೌಢಶಾಲೆ ಎಲಿಮಲೆ ಇವರುಗಳು ಪಡೆದುಕೊಂಡರು.
ನ.೨೧ ರಂದು ಲಯನ್ಸ್ ಸೇವಾ ಸದನದಲ್ಲಿ ನಡೆದು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಲಯನ್ ದೊಡ್ಡಣ್ಣ ಬರೆಮೇಲುರವರು ಆಗಮಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದ ನಿರ್ದೇಶಕರಾಗಿ ಲಯನ್ ಲೀಲಾ ದಾಮೋದರರವರು ಪ್ರಬಂಧ ಸ್ಪರ್ಧೆಯನ್ನು ನೆರವೇರಿಸಿದ್ದು, ಎಲ್ಲಾ ವಿದ್ಯಾರ್ಥಿಗಳ ವ್ಯಕ್ತ ಪಡಿಸಿದ ಭಾವನೆ / ಕನಸುಗಳ ಬಗ್ಗೆ ಸಭೆಗೆ ತಿಳಿಸಿದರು. ಲಯನ್ಸ್ ಹೂವಯ್ಯ ಸೂಂತೋಡು ರವರು ಸ್ಪರ್ಧೆ ಏರ್ಪಡಿಸಲು ಸಹಕರಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಲ | ರಾಮಚಂದ್ರ ಪೆಲ್ತಡ್ಕರವರು ವಹಿಸಿದರು.
ಲಯನ್ ನಿಕಟ ಪೂರ್ವಾಧ್ಯಕ್ಷ ಲ| ಗಂಗಾಧರ ರೈ, ಕಾರ್ಯದರ್ಶಿ | ಲ | ವೀರಪ್ಪ ಗೌಡ, ಖಜಾಂಜಿ ಲ | ಸಂಜೀವ ಕತ್ಲಡ್ಕ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.