ಕೇಂದ್ರ ಸರಕಾರದ ನ್ಯಾಶನಲ್ ಡೆವಲಪ್ಮೆಂಟ್ ಏಜೆನ್ಸಿಯಿಂದ ಪ್ರವರ್ತಿತ ಭಾರತ್ ಸೇವಕ ಸಮಾಜದ ವತಿಯಿಂದ ಸುಳ್ಯದ ಶ್ರೀಹರಿ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ 2020-21ನೇ ಸಾಲಿನ ನರ್ಸರಿ/ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಗೆ ದಾಖಲಾತಿ ಪಡೆಯಲು ಡಿ.10 ರವರೆಗೆ ಅವಕಾಶವಿದೆ.
ಭಾರತ್ ಸೇವಕ್ ಸಮಾಜದ ವತಿಯಿಂದ ನಡೆಸಲಾಗುವ ಈ ತರಬೇತಿಯ ಪ್ರಮಾಣ ಪತ್ರಕ್ಕೆ ದೇಶ-ವಿದೇಶದಲ್ಲಿ ಮಾನ್ಯತೆ ಇದೆ. ಮಗುವಿಗೆ ಮೊಂಟೆಸ್ಸರಿ ವಿಧಾನದಲ್ಲಿ ಶಿಕ್ಷಣ ನೀಡುವುದನ್ನು ಡಿ.ಇಡಿ/ಬಿ.ಇಡಿ ಮಾದರಿ ಪಠ್ಯಕ್ರಮದ ರೀತಿಯಲ್ಲಿ ಕಲಿಸಲಾಗುತ್ತಿದೆ. ಸಂಸ್ಥೆಯು ಸತತ ೩ ವರ್ಷಗಳಿಂದ ಶೇ.100 ಫಲಿತಾಂಶ ಹಾಗೂ 2017-18 ಮತ್ತು 2018-19ನೇ ಸಾಲಿನಲ್ಲಿ ಶೇ.100 ಉದ್ಯೋಗವಕಾಶವನ್ನೂ ಪಡೆದಿದೆ. ತರಬೇತಿ ಪಡೆಯಲಿಚ್ಚಿಸುವವರಿಗೆ ಡಿ.10ರವರೆಗೆ ಅವಕಾಶವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.