ಮಂಗಳೂರಿನಲ್ಲಿ ಉಗ್ರ ಸಂಘಟನೆಗಳ ಪರ ಬರೆದ ಗೋಡೆ ಬರಹ ಕೃತ್ಯವನ್ನು ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಗುರುದತ್ತ್ ಜಿ.ನಾಯಕ್ ಖಂಡಿಸಿದ್ದಾರೆ.
ಮಂಗಳೂರು ನಗರದ ಕದ್ರಿಯಲ್ಲಿರುವ ಸರ್ಕಿಟ್ ಹೌಸ್ನಿಂದ ಕೆಳಗಡೆ ಹೋಗುವ ರಸ್ತೆ ಬದಿಯಲ್ಲಿನ ಅಪಾರ್ಟ್ಮೆಂಟ್ವೊಂದರ ಕಾಂಪೌಂಡ್ ಮೇಲೆ ಲಷ್ಕರ್ ಜಿಂದಾಬಾದ್ ಎಂಬಿತ್ಯಾದಿ ಬರಹವನ್ನು ಬರೆದಿರುವುದು ನ.27ರಂದು ನಡೆದಿದೆ. ಅಲ್ಲದೆ ಲಷ್ಕರ್ ಉಗ್ರರನ್ನು ಕರೆಸುವುದಾಗಿ ಬೆದರಿಕೆಯನ್ನು ಕೂಡ ಹಾಕಿದ್ದು ಇದು ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಯನ್ನು ಕದಡಿಸುವ ಹುನ್ನಾರವಾಗಿರುತ್ತದೆ. ಇದನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಛಾ ತೀವ್ರವಾಗಿ ಖಂಡಿಸುತ್ತದೆ.
ಈ ರೀತಿ ಗೋಡೆ ಬರಹವನ್ನು ಬರೆದಿರುವ ಮತೀಯ ವ್ಯಕ್ತಿಗಳನ್ನು ಕೂಡಲೇ ದ.ಕ. ಜಿಲ್ಲಾ ಪೋಲೀಸ್ ಕಮೀಷನರ್ರವರು ಬಂಧಿಸಿ ಅರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಂಡು ಮುಂದೆ ಈ ರೀತಿಯ ಅನಾಹುತಗಳು ಆಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಗುರುದತ್ತ್ ಜಿ.ನಾಯಕ್ ತಿಳಿಸಿದ್ದಾರೆ.