ಬಳ್ಪ: ಸಂಚಾರಕ್ಕೆ ಅಯೋಗ್ಯವಾದ ಭೋಗಾಯನಕೆರೆ ಎಣ್ಣೆಮಜಲು ರಸ್ತೆ

Advt_Headding_Middle
Advt_Headding_Middle
Advt_Headding_Middle
Advt_Headding_Middle

ಸಂಸದರ ಆದರ್ಶ ಗ್ರಾಮ ಬಳ್ಪದಲ್ಲಿ ಬಹುತೇಕ ಗ್ರಾಮೀಣ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿದೆಯೆಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿರುವ ರಸ್ತೆ ಸಂಪರ್ಕ ಅಸಮರ್ಪಕವಾಗಿದ್ದರೆ ಗ್ರಾಮದ ಪ್ರತೀ ಮನೆಯವರೂ, ಆ ಗ್ರಾಮಕ್ಕೆ ಆಗಮಿಸುವವರೂ ಇದರ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಪ್ರತೀ ದಿನ ಕೆಲಸಕ್ಕಾಗಿ ಹೊರಗೆ ಹೋಗುವವರು, ಶಾಲಾ ಕಾಲೇಜುಗಳಿಗೆ ತೆರಳುವವರು ದಿನಾ ಇಂತಹ ರಸ್ತೆಯಲ್ಲಿ ಸಂಚರಿಸುವಾಗ ಜನಪ್ರತಿನಿಧಿಗಳಿಗೆ, ಇಲಾಖಾಧಿಕಾರಿಗಳಿಗೆ ಹಿಡಿಶಾಪ ಹಾಕಿಕೊಂಡೇ ಸಂಚರಿಸುತ್ತಾರೆ. ದಶಕಗಳಿಂದ ಅಭಿವೃದ್ಧಿ ಕಾಣದ ರಸ್ತೆಗಳಲ್ಲಿ ಸಂಚರಿಸಿ ಬೇಸತ್ತ ಕೇನ್ಯ, ಬೀದಿಗುಡ್ಡೆ ಭಾಗದ ಜನರು ರಸ್ತೆ ಹೋರಾಟ ಸಮಿತಿಯನ್ನು ರಚಿಸಿ ಆ ಮೂಲಕ ಶಾಸಕರಿಗೆ ಮನವಿ ಸಲ್ಲಿಸಿದ ಮೇರೆಗೆ ಶಾಸಕರು ಗ್ರಾಮಸ್ಥರನ್ನು ಒಗ್ಗೂಡಿಸಿ ರಸ್ತೆ ದುರಸ್ತಿ ಮಾಡಿ ಕೊಡುವ ಭರವಸೆಯನ್ನು ನೀಡಿದ್ದಾರದರೂ ಅಲ್ಲಿಯ ತನಕ ಇದೇ ರಸ್ತೆಯಲ್ಲಿ ಸಂಚರಿಸಬೇಕಲ್ಲವೇ. ದ್ವಚಕ್ರ ವಾಹನ ಸವಾರರ ಪಾಡಂತೂ ಇನ್ನೂ ಶೋಚನೀಯ. ಬಳ್ಪ ಗ್ರಾಮಕ್ಕೆ ಸಂಬಂಧಿಸಿದ ಕೆಲವು ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ಬಗ್ಗೆ ರಸ್ತೆಯ ಫೊಟೊ ಹಾಕಿ
“ಈ ರಸ್ತೆಯಲ್ಲೊಮ್ಮೆ ಸಂಚರಿಸಿ ನಾವು ಅನುಭವಿಸುವ ನರಕ ಯಾತನೆ ನಿಮಗೆ ತಿಳಿಯುವುದ”, “ಪಿ.ಡಿ.ಒ. ಅಧಿಕಾರಿಗಳೇ ಈ ರಸ್ತೆಯಲ್ಲೊಮ್ಮೆ ಸಂಚರಿಸಿ” ಎಂಬ ಕಮೆಂಟ್ ಗಳು ಹರಿದಾಡುತ್ತಿದೆ. ಶೀಘ್ರವಾಗಿ ಈ ಭಾಗದ ಜನರ ಸಮಸ್ಯೆ ಬಗೆಹರಿಯಲೆಂಬುದು ನಮ್ಮ ಆಶಯ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.