ಕರ್ನಾಟಕ ಗೃಹ ಮಂಡಳಿಯ ನೂತನ ಉಪ ಪ್ರಧಾನ ವ್ಯವಸ್ಥಾಪಕರಾಗಿ ಶ್ರೀಮತಿ ಮನೋರಮ ಮಳಿ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
ಬೆಂಗಳೂರು ಉಪ ನಗರ ರೈಲು ಯೋಜನೆ ಭೂಸ್ವಾಧೀನಾಧಿಕಾರಿಗಳ ಕಚೇರಿಯಲ್ಲಿ ತಹಶೀಲ್ದಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಇವರಿಗೆ ರಾಜ್ಯ ಸರ್ಕಾರ ಅಸಿಸ್ಟೆಂಟ್ ಕಮಿಷನರ್ ಆಗಿ ಕೆ.ಎ.ಎಸ್ ಕಿರಿಯ ಶ್ರೇಣಿಗೆ ಮುಂಬಡ್ತಿ ನೀಡಿದೆ. ಕನಕಮಜಲು ಗ್ರಾಮದ ಮಳಿ ದಿ. ಕೃಷ್ಣಪ್ಪ ಗೌಡರ ಪುತ್ರಿಯಾಗಿರುವ ಇವರು ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ಹಳೆ ವಿದ್ಯಾರ್ಥಿನಿ. ಪ್ರಸ್ತುತ ಬೆಂಗಳೂರಿನಲ್ಲಿ ಕುಟುಂಬ ಸಮೇತ ನೆಲೆಸಿರುವ ಇವರು ಗುತ್ತಿಗಾರು ಗ್ರಾಮದ ಕಮಿಲ ಬಿ.ನಾರಾಯಣ ಗೌಡರ ಧರ್ಮಪತ್ನಿ.