ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಸುಬ್ರಹ್ಮಣ್ಯದ ಮೂವರಿಗೆ ಇಂದು ಧನ ಸಹಾಯ ವಿತರಿಸಲಾಯಿತು.
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಸುಬ್ರಹ್ಮಣ್ಯದ ನೂಚಿಲ ನಿವಾಸಿ ಲಕ್ಷ್ಮೀನಾರಾಯಣ ಭಟ್, ವಾಲಗದಕೇರಿ ಪರಿಶಿಷ್ಟ ಜಾತಿಯ ಕಾಲೊನಿಯ ನಿವಾಸಿ ಸುರೇಶ ಹಾಗೂ ಅಗ್ರಹಾರ ಸಮೀಪದ ನಿವಾಸಿ ಶ್ರೀಮತಿ ಸುಶೀಲ ಎಂಬವರಿಗೆ ಇಂದು ಸಹಾಯ ಧನ ವಿತರಿಸಲಾಯಿತು. ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾದ ಹರೀಶ ಇಂಜಾಡಿ, ಮೋಹನದಾಸ ರೈ,ನವೀನ ಕುಮಾರ್,ಉದ್ಯಮಿ, ಗುತ್ತಿಗೆದಾರ ರವಿ ಕಕ್ಕೆಪದವು, ಸಹಕಾರಿ ಬ್ಯಾಂಕಿನ ನಿರ್ದೇಶಕ ರವೀಂದ್ರ ರುದ್ರಪಾದ, ಜೇಸಿ ಪೂರ್ವಾಧ್ಯಕ್ಷ ಶೇಷಕುಮಾರ ಶೆಟ್ಟಿ ಮೊದಲಾದವರ ನೇತೃತ್ವದಲ್ಲಿ ಸ್ಥಳೀಯ ದಾನಿಗಳಿಂದ ವೈದ್ಯಕೀಯ ಚಿಕಿತ್ಸಾ ಸಹಾಯಧನಕ್ಕಾಗಿ ಹಣ ಸಂಗ್ರಹಹಿಸಲಾಗಿತ್ತು. rs. 96000/- ಸಂಗ್ರಹಿಸಲಾಗಿದ್ದು ಇದನ್ನು ತಲಾ ರೂಪಾಯಿ 32000/- ದಂತೆ ಮೂರು ಜನರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಶಿವಕುಮಾರ ಕಾಮತ್, ಕಾರ್ತಿಕ್ ಕಾಮತ್, ರವೀಂದ್ರ ನೂಚಿಲ, ಲಕ್ಷ್ಮೀ ಕಲ್ಲಪಣೆ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮುತ್ತಪ್ಪ, ಜೇಸಿ ಅಧ್ಯಕ್ಷ ಮಣಿಕಂಠ.,ಮಾಧವ ದೇವರಗದ್ದೆ, ಗೋಪಾಲ ಎಣ್ಣೆಮಜಲು, ದಿವ್ಯ ವಾಲಗದಕೇರಿ ಮೊದಲಾದವರು ಉಪಸ್ಥಿತರಿದ್ದರು.