ಸೌದೆ ತರಲು ಕಾಡಿಗೆ ಹೋದ ಸಂದರ್ಭದಲ್ಲಿ ಅಸ್ವಸ್ಥಗೊಂಡು ಕಿರುಚಿಕೊಂಡಾಗ ಮನೆಯವರು ಧಾವಿಸಿ ಆ ವ್ಯಕ್ತಿಯನ್ನು ಮನೆಗೆ ಕರೆದುಕೊಂಡು ಉಪಚರಿಸುತ್ತಿದ್ದಾಗ ಕೊನೆಯುಸಿರೆಳೆದ ಘಟನೆ ಎಡಮಂಗಲದಿಂದ ನ. 27 ರಂದು ವರದಿಯಾಗಿದೆ.
ಎಡಮಂಗಲ ಗ್ರಾಮದ ಶಾಂತಿಯಡ್ಕ ನಿವಾಸಿ ಮಾದಿಗ ಮುಗೇರ ಎಂಬವರು ಸೌದೆ ತರಲೆಂದು ಮನೆಯ ಸಮೀಪದ ಕಾಡಿಗೆ ತೆರಳಿದ್ದರು.
ಈ ಸಂದರ್ಭದಲ್ಲಿ ಅವರು ಅಸ್ವಸ್ಥಗೊಂಡು ಬೊಬ್ಬೆ ಹಾಕಿದರೆನ್ನಲಾಗಿದೆ. ಇದನ್ನು ಗಮನಿಸಿದ ಮನೆಯವರು ಅವರನ್ನು ಮನೆಗೆ ಕರೆದೊಯ್ದು ಉಪಚರಿಸುತ್ತಿರುವಾಗ ಮಾದಿಗ ಮುಗೇರರು ನಿಧನ ಹೊಂದಿದರೆನ್ನಲಾಗಿದೆ. ಇವರಿಗೆ 58 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕುಂಞಾಳು, ಇಬ್ಬರು ಪುತ್ರರಾದ ಆನಂದ, ಚೋಮಣ್ಣ, ಓರ್ವ ಪುತ್ರಿ ಚೆನ್ನಮ್ಮ, ಸಹೋದರರಾದ ಕರಿಯ ಮುಗೇರ, ಅಂಬಾಡಿ ಮುಗೇರ, ಬಾಬು ಮುಗೇರ, ಓರ್ವ ಸಹೋದರಿ ಹೊನ್ನಮ್ಮ ಸೇರಿದಂತೆ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.