ಗೌಡ ಯುವ ಸೇವಾ ಸಂಘದ ಮಹಾಸಭೆ ನ. 29 ರಂದು ನಡೆಯಿತು. ಮೋಹನ್ ರಾಂ ಸುಳ್ಳಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಯಲ್ಲಿ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ , ವೆಂಕಟ್ರಮಣ ಬ್ಯಾಂಕ್ನ ಅಧ್ಯಕ್ಷ ಪಿ.ಸಿ ಜಯರಾಮ, ಪ್ರಧಾನ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಕೋಶಾಧಿಕಾರಿ ತೇಜಪ್ರಸಾದ್ ಅಮೆಚೂರ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾವತಿ ಮಾಣಿಬೆಟ್ಟು, ಉಪಸ್ಥಿತರಿದ್ದರು.
ಮೋಹನ್ ರಾಂ ಸುಳ್ಳಿ ಸ್ವಾಗತಿಸಿದರು. ವರದಿ ಪ್ರ. ಕಾರ್ಯದರ್ಶಿ ಲೆಕ್ಕ ಪತ್ರ ಮಂಡನೆ ಮಾಡಿದರು. ತೇಜಪ್ರಸಾದ್ ಅಮೆಚೂರ್ ವಂದಿಸಿದರು. ಶ್ರೀಕಾಂತ್ ಮಾವಿನಕಟ್ಟೆ ಸಹಕಾರಿ ರತ್ನ ಪ್ರಶಸ್ತಿ ಪಡೆದ ಚಂದ್ರ ಕೋಲ್ಚಾರ್ ಹಾಗೂ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ದೊಡ್ಡಣ್ಣ ಬರೆಮೇಲುರವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.