ಬೆಳ್ಳಾರೆ ಕಲ್ಪವೃಕ್ಷ ಆರ್ಕೇಡ್ ನಲ್ಲಿರುವ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ 5 ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಗಣಹೋಮ ಮತ್ತು ಲಕ್ಷ್ಮೀ ಪೂಜೆ ನ.30 ರಂದು ಬೆಳಿಗ್ಗೆ ನಡೆಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಶಾಖಾ ವ್ಯವಸ್ಥಾಪಕ ನಟರಾಜನ್.ಡಿ.ಆರ್.,
ಕಲ್ಪವೃಕ್ಷ ಆರ್ಕೇಡ್ ಮಾಲಕ ಎಂ.ಮಾಧವ ಗೌಡ, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು, ಗಿರೀಶ್ ರೈ ,
ಮತ್ತು ಬ್ಯಾಂಕಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.