ಸುಳ್ಯ ಕೆವಿಜಿ ಆಯುರ್ವೇದ ಕಾಲೇಜು ಬಳಿ ಅಕ್ಷಯ ಅರ್ಕೇಡಾದಲ್ಲಿ ಗೀತಾಗಣೇಶ್ ಮಾಲಕತ್ವದ ಶ್ರೀದೇವಿ ವಸ್ತ್ರ ಮಳಿಗೆ ನ.30 ರಂದು ಶುಭಾರಂಭ ಗೊಂಡಿತು.
ಇದರ ಉದ್ಘಾಟನೆಯನ್ನು ಸುಳ್ಯ ಶಾಸಕ ಎಸ್ ಅಂಗಾರ ನೆರವೇರಿಸಿದರು.
ಮಾಲಕರ ಕುಟುಂಬದ ಹಿರಿಯರಾದ ಕೇಪು ಹೆಂಗಸು ದೀಪ ಪ್ರಜ್ವಲಿಸಿದರು.
ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ,ನಗರ ಪಂಚಾಯತ್ ಸದಸ್ಯೆ ವಾಣಿಶ್ರೀ,ಶಿಲಾವತಿ ಕುರುಂಜಿ,ಮಾಜಿ ಸದಸ್ಯ ರಮಾನಂದ ರೈ,ಸುಪ್ರೀತ್ ಮೊಟಂಡ್ಕ, ಚಂದ್ರಶೇಖರ ಪೂಜಾರಿ,ಶ್ರೀನಾಥ್ ಅಲೆಟ್ಟಿ, ಕುಲದೀಪ್ ಪೆಲ್ತಡ್ಕ,ಕೃಷಿ ಇಲಾಖೆಯ ಗನ್ಯ,ಚೋಮ ಎ.ಪಿ,ಲಕ್ಷಣ ಎ.ಪಿ,ಅನಂದ ಎ.ಪಿ,ಸೋಮಶೇಖರ ಎ.ಪಿ,ಬಿ.ಕುಂಞಾ,ವೆಂಕಮ್ಮ ಪೂಂಜಾಲಕಟ್ಟೆ,ರಮೇಶ್ ಮೊದಲಾದವರು ಉಪಸ್ಥಿತರಿದ್ದರು. ವೆಂಕಪ್ಪ ಕುಂಟಾಳುಪಳಿಕೆ ಪ್ರಾರ್ಥಿಸಿದರು,ದಿಲೀಪ್ ಸ್ವಾಗತಿಸಿ ಗೀತಾ ಗಣೇಶ್ ವಂದಿಸಿದರು.
ಮಳಿಗೆಯಲ್ಲಿ ಮಹಿಳೆಯರ ಬಟ್ಟೆಬರೆಗಳು,ಟಾಪ್ಸ್ ,ಲೆಗ್ಗಿನ್ಸ್,ಡ್ರೆಸ್ ಮೆಟೀರಿಯಲ್ಸ್,ಅಲ್ಲದೇ ಅತ್ಯಾಧುನಿಕ ಶೈಲಿಯ ಮಹಿಳೆಯರ ವಸ್ತ್ರಗಳು ದೊರೆಯುತ್ತದೆ