ಡಿ. 22, 27 ರಂದು ಎರಡು ಹಂತಗಳಲ್ಲಿ ಚುನಾವಣೆ
ಇಂದಿನಿಂದಲೇ ನೀತಿ ಸಂಹಿತೆ ಜಾರಿ
ಗ್ರಾ.ಪಂ.ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಇಂದು ಮಧ್ಯಾಹ್ನ ದಿನಾಂಕ ಪ್ರಕಟಿಸಿದೆ.
ಡಿ.22, 27 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಇಂದಿನಿಂದ ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.
ಸರಕಾರ ಹಾಗೂ ವಿವಿಧ ನಿಗಮ, ತಾ.ಪಂ,ಜಿ.ಪಂ ನಿಂದ ಹೊಸ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ, ಶಿಲಾನ್ಯಾಸಗಳಿಗೆ ಬ್ರೇಕ್ ಬೀಳಲಿದೆ. ಜತೆಗೆ ಈವರೆಗೆ ನಡೆದ ಅಭಿವೃದ್ದಿ ಕಾರ್ಯಗಳ ಉದ್ಘಾಟನೆಗೂ ತಡೆ ಬರಲಿದೆ.
58೦೦ ಗ್ರಾಮ ಪಂಚಾಯಿತಿಗಳ 85೦೦೦ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ತಳಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಗ್ರಾ.ಪಂ.ಚುನಾವಣೆ ಸಹಕಾರಿಯಾಗಲಿದೆ.
ಮೊದಲ ಹಂತದ ಚುನಾವಣೆ ಮತದಾನ ಡಿಸೆಂಬರ್ 22 ರಂದು ನಡೆಯಲಿದ್ದು, ಎರಡನೇ ಹಂತದ ಚುನಾವಣೆ 27ರಂದು ನಡೆಯಲಿರುವುದು. ಡಿ.3೦ರಂದು ಚುನಾವಣಾ ಫಲಿತಾಂಶ ಹೊರಬರಲಿದೆ.
ನಾಮಪತ್ರ ಸಲ್ಲಿಕೆ ಕಡೇ ದಿನ ಡಿ. 11ಆಗಿರುತ್ತದೆ. ನಾಮಪತ್ರ ವಾಪಸ್ ಪಡೆಯಲು ಡಿ. 14 ಕೊನೆಯ ದಿನವಾಗಿರುತ್ತದೆ. ಒಟ್ಟು 5762 ಗ್ರಾಮಪಂಚಾಯತ್ಗಳ 92121 ಗ್ರಾಮಪಂಚಾಯತ್ ಸ್ಥಾನಗಳಿಗೆ ಚುನಾವಣೆ ನಡೆಯಲಿರುವುದು.