ಗ್ರಾಮ ಪಂಚಾಯತ್ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ದಿನ ನಿಗದಿ ಮಾಡಿದ್ದು, 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿ. 27 ರಂದು ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ನಡೆಯಲಿದೆ. ದ.ಕ. ಜಿಲ್ಲೆಯ ಮಂಗಳೂರು, ಮೂಡಬಿದಿರೆ, ಬಂಟ್ವಾಳದ ಗ್ರಾಮ ಪಂಚಾಯತ್ಗೆ ಪ್ರಥಮ ಹಂತದಲ್ಲಿ ಡಿ. 22ರಂದು ಹಾಗೂ ಬೆಳ್ತಂಗಡಿ, ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕಿನ ಗ್ರಾಮ ಪಂಚಾಯತ್ಗಳಿಗೆ ದ್ವಿತೀಯ ಹಂತದಲ್ಲಿ ಡಿ. 27 ರಂದು ಚುನಾವಣೆ ನಡೆಯಲಿದೆ.