ಮಂಗಳೂರಿನಲ್ಲಿ ಉಗ್ರ ಸಂಘಟನೆಗೆ ಜೈಕಾರ ಹಾಕುವ ಗೋಡೆ ಬರಹವನ್ನು ಖಂಡಿಸಿ ಬರೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಎ.ಬಿ.ವಿ.ಪಿ ಸುಳ್ಯ ನಗರ ವತಿಯಿಂದ ತಹಶಿಲ್ದಾರ್ ಮುಖಾಂತರ ಗೃಹ ಸಚಿವರಿಗೆ ನ. ೩೦ ರಂದು ಮನವಿ ಸಲ್ಲಿಸಲಾಯಿತು.
೨೦೦೮ ನವೆಂಬರ್ ೨೬ ದೇಶ ಕಂಡ ಕರಾಳ ದಿನ. ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರರ ಕೃತ್ಯದಿಂದ ಮುಂಬೈ ಮಹಾನಗರದಲ್ಲಿ ಸೈನಿಕರು, ಪೋಲಿಸರು, ಸೇರಿ ಹಲವಾರು ನಾಗರಿಕರು ಮೃತಪಟ್ಟ ದಿನ. ಇಡೀ ದೇಶವೇ ಶ್ರದ್ಧಾಂಜಲಿ ಸಲ್ಲಿಸಬೇಕಾದ ಈ ದಿನ ಕೆಲ ದೇಶದ್ರೋಹಿಗಳು ಈ ರೀತಿಯ ಗೋಡೆ ಬರಹಗಳನ್ನು ಬರೆದು ಮಂಗಳೂರಿನ ಶಾಂತಿಯನ್ನು ಕೆಡಿಸುವ ಮೂಲಕ ವಿಕೃತಿ ಮೆರೆದಿದ್ದಾರೆ .ಈ ಕೂಡಲೇ ಈ ಘಟನೆಯ ಹಿಂದಿರುವ ದೇಶ ದ್ರೋಹಿಗಳನ್ನು ಬಂಧಿಸದಿದ್ದರೆ ಮುಂದೆ ಇಂತಹ ಘಟನೆಗಳು ಮರುಕಳಿಸಿ ದೊಡ್ಡ ಅನಾಹುತವೇ ಸಂಭವಿಸಬಹುದು .ಈ ನಿಟ್ಟಿನಲ್ಲಿ ಈ ಘಟನೆಯ ಹಿಂದಿರುವ ದೇಶದ್ರೋಹಿಗಳನ್ನು ಬಂಧಿಸಿ ಅವರ ವಿರುದ್ದ ಕಠಿಣ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಎ.ಬಿ.ವಿ.ಪಿ ಸುಳ್ಯ ನಗರ ಕಾರ್ಯದರ್ಶಿ ರುಚಿರ್ ರೈ, ಸಹ ಕಾರ್ಯದರ್ಶಿ ರವೀಶ ಕೇವಳ ಕಾರ್ಯಕರ್ತರಾದ ಮೇಘರಾಜ್ ,ಕೀರ್ತನ್ ರವರು ಉಪಸ್ಥಿತರಿದ್ದರು.