ಯಕ್ಷ ತುಳು ಪರ್ಬೋ ಮಂಗಳೂರು, ಇವರು ಆಯೋಜಿಸಿದ ಯಕ್ಷೋತ್ಸವ ಯಜ್ಞ ಕಾರ್ಯಕ್ರಮದ ಸಮಾರೋಪ ಸಮಾರಂಭವು ಸುಬ್ರಹ್ಮಣ್ಯದ ಶ್ರೀ ವನದುರ್ಗಾ ದೇವಸ್ಥಾದ ವನದುರ್ಗಾ ಸಭಾ ಭವನದಲ್ಲಿ ನ.29 ರಂದು
ನಡೆಯಿತು .
ಸಂಪುಟ ನರಸಿಂಹ ಮಠ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ
ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಯಕ್ಷಗಾನವು ಜಿಲ್ಲೆಯ ಗಂಡು ಕಲೆ ಯಾಗಿದ್ದು ಕಲಾವಿದರಿಗೆ ಕಷ್ಟ ಕಾಲದಲ್ಲಿ ಎಲ್ಲರೂ ಸಹಕಾರ ನೀಡ ಬೇಕಾದ್ದು ಧರ್ಮ ಎಂದು ಆಶೀರ್ವಚನ ಗೈದರು.
ಅಧ್ಯಕ್ಷ ಸ್ಥಾನ ವಹಿಸಿದ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಎಸ್ ಅಂಗಾರ
ಯಕ್ಷಗಾನಕ್ಕೆ ಮತ್ತು ಕಲಾವಿದರಿಗೆ ಸರಕಾರದಿಂದ ಗರಿಷ್ಠ ಪ್ರಮಾಣದ ಸಹಕಾರ ಸಿಗಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ತಿಳಿಸಿದರು.
ಖ್ಯಾತ ಕಲಾವಿದ ಮನೋಹರ ಕುಮಾರ ಇವರು ಅತಿಥಿ ಸ್ಥಾನದಿಂದ ಕಲಾವಿದರ ಕಷ್ಟ ಗಳನ್ನುಹೇಳಿದರು. ಈ ಸಂದರ್ಭ
ಭಾಗವತರಾದ ಆನೆಕಲ್ಲು ಗಣಪತಿ ಭಟ್ ಇವರಿಗೆ ಸಹಾಯ ಧನ ನೀಡಿ ಗೌರವಿಸಲಾಯಿತು.
ಸಂಘಟಕ ಶ್ರೀಕೃಷ್ಣ ಶರ್ಮ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಬೆಂಕಿನಾಥೇಶ್ವರ ಮೇಳದ ಸಂಚಾಲಕ ಸುರೇಂದ್ರ ಮಲ್ಲಿ ಧನ್ಯವಾದ ಸಮರ್ಪಿಸಿದರು.
ಸತ್ಯ ಶಂಕರ ಕಾರ್ಯಕ್ರಮ ನಿರೂಪಿಸಿದರು. ಗಣೇಶ ಕಾಶಿಕಟ್ಟೆ ಮತ್ತಿತರರು ಸಹಕರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಜಿಲ್ಲೆಯ ಹೆಸರಾಂತ ಕಲಾವಿದರ ಕೂಡಿವಿಕೆಯಿಂದ
“ಕುಡಿಯನ ಕೊಂಬೆರಲು”
“ಲವ-ಕುಶ” ಎಂಬ ಯಕ್ಷಗಾನ ಬಯಲಾಟ ಜರಗಿತು.