ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ನಡೆದ ಅರೆಭಾಷೆ ರಂಗ ಶಿಬಿರದ ಸಮಾರೋಪ ಸಮಾರಂಭ ಮತ್ತು ಜೀವನ್ ರಾಂ ಸುಳ್ಯ ನಿರ್ದೇಶನದ ‘ಸಾಹೇಬ್ರು ಬಂದವೇ!!’ ಅರೆಭಾಷೆ ನಾಟಕದ ಪ್ರದರ್ಶನವನ್ನು ಡಿ.04 ಮತ್ತು 06 ರಂದು ಸಂಜೆ 6.00ಕ್ಕೆ ಸುಳ್ಯಹಳೆಗೇಟಿನಲ್ಲಿರುವ ರಂಗಮನೆಯಲ್ಲಿ ಏರ್ಪಡಿಸಲಾಗಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ವಹಿಸಲಿದ್ದು, ಮಾನ್ಯ ಶಾಸಕರಾದ ಎಸ್.ಅಂಗಾರರವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಅತಿಥಿಗಳಾಗಿ ಸುಬ್ರಹ್ಮಣ್ಯ ಕೆ.ಎಸ್.ಎಸ್.ಕಾಲೇಜು ಇಲ್ಲಿನ ಸಹ ಪ್ರಾಧ್ಯಾಪಕರಾದ ಡಾ|ಎನ್.ಎಸ್.ಗೋವಿಂದ ಹಾಗೂ ಸುಳ್ಯ ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷರಾದ ದಿನೇಶ್ ಮಡಪ್ಪಾಡಿ ಭಾಗವಹಿಸಲಿದ್ದಾರೆ.ನಿರ್ದೇಶಕ ಜೀವನ್ ರಾಂ ಸುಳ್ಯ ಉಪಸ್ಥಿತರಿರುವರು.
ನಿಖೊಲಾಯ್ ಗೊಗಲ್ ಬರೆದ ರಷ್ಯನ್ ಮೂಲದ ಈ ನಾಟಕವನ್ನು
ಕೆ.ವಿ.ಸುಬ್ಬಣ್ಣ ಮತ್ತು ಕೆ.ವಿ.ಅಕ್ಷರ ಕನ್ನಡಕ್ಕೆ ಹಾಗೂ ಜಯಪ್ರಕಾಶ್ ಕುಕ್ಕೇಟಿ ಅರೆಭಾಷೆಗೆ ಅನುವಾದಿಸಿದ್ದಾರೆ.
ವಿಡಂಬನೆ ಮತ್ತು ಹಾಸ್ಯಪ್ರಧಾನ ‘ಸಾಹೇಬ್ರು ಬಂದವೇ!!’ ನಾಟಕಕ್ಕೆ
ಉಚಿತ ಪ್ರವೇಶವಾಗಿದ್ದು,ಸಮಯಕ್ಕೆ ಸರಿಯಾಗಿ ಆರಂಭವಾಗಲಿದೆ. ಸೀಮಿತ ಆಸನದ ವ್ಯವಸ್ಥೆಯಿರುವುದರಿಂದ 10 ನಿಮಿಷ ಬೇಗನೇ ಬರಲು, ಕೋವಿಡ್-19 ನಿಯಮ ಪಾಲನೆ ಪ್ರಕಾರ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಲು ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ವಿನಂತಿಸಿದ್ದಾರೆ.